×
Ad

ಯೂತ್ ಒಲಿಂಪಿಕ್ಸ್ : ಮೊದಲ ದಿನ ಭಾರತಕ್ಕೆ ಶೂಟಿಂಗ್‌ನಲ್ಲಿ ಬೆಳ್ಳಿ

Update: 2018-10-07 22:21 IST

 ಬ್ಯೂನಸ್ ಐರಿಸ್, ಅ.7: ಯೂತ್ ಒಲಿಂಪಿಕ್ಸ್‌ನ ಮೊದಲ ದಿನ ಭಾರತದ ಶೂಟರ್ ತುಷಾರ್ ಮಾನೆ ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸುವ ಮೂಲಕ ಭಾರತದ ಖಾತೆಗೆ ಮೊದಲ ಪದಕ ಜಮೆ ಮಾಡಿದ್ದಾರೆ.

 ಇಂದು ಆರಂಭಗೊಂಡ ಯೂತ್ ಒಲಿಂಪಿಕ್ಸ್‌ನಲ್ಲಿ ತುಷಾರ್ ಮಾನೆ ಮೂರನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು. ಮಾನೆ ಫೈನಲ್‌ನಲ್ಲಿ 247.5 ಪಾಯಿಂಟ್ಸ್ ದಾಖಲಿಸಿ ಎರಡನೇ ಸಾನದೊಂದಿಗೆ ಬೆಳ್ಳಿ ಪಡೆದರು. ರಶ್ಯದ ಗ್ರಿಗೋರಿ ಶ್ಯಾಮಕೋವಾ (249.2) ಅಗ್ರಸ್ಥಾನದೊಂದಿಗೆ ಚಿನ್ನ ಮತ್ತು ಸರ್ಬಿಯಾದ ಅಲೆಕ್ಸ ಮಿಟ್ರೊವಿಕ್ (227.9) ಕಂಚು ಪಡೆದರು.

 ಯೂತ್ ಒಲಿಂಪಿಕ್ಸ್‌ನಲ್ಲಿ ಒಟ್ಟು 13 ಕ್ರೀಡೆಗಳಲ್ಲಿ ಭಾರತ 46 ಅಥ್ಲೀಟ್‌ಗಳು ಪದಕದ ಬೇಟೆ ನಡೆಸಲಿದ್ದಾರೆ. ಚೀನಾದ ನಾನ್‌ಜಿಂಗ್‌ನಲ್ಲಿ 2014ರಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತ 1 ಬೆಳ್ಳಿ ಮತ್ತು 1 ಕಂಚು ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News