ಲೈಂಗಿಕ ಕಿರುಕುಳ ತಡೆ ಉಚಿತ ಸಹಾಯವಾಣಿಗೆ ಅಶ್ಲೀಲ ಕರೆ !
ಹೊಸದಿಲ್ಲಿ, ಅ. 7: ಮಕ್ಕಳಿಗೆ ಲೈಂಗಿಕ ಕಿರುಕುಳದ ಕುರಿತು ದೂರು ನೀಡುವ ಸರಕಾರದ ಉಚಿತ ಸಹಾಯವಾಣಿಗೆ ಲೈಂಗಿಕ ಸೇವೆಯ ಕರೆಗಳು ಬರುವುದಲ್ಲದೆ, ಅಶ್ಲೀಲ ವಿಚಾರಗಳಿಗೆ ಸಂಬಂಧಿಸಿ ಆನ್‌ಲೈನ್ ಹುಡುಕಾಟದಲ್ಲಿ ಈ ನಂಬರ್ ಕಂಡು ಬಂದಿರುವುದರಿಂದ ಅದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಚಿತ ಸಹಾಯವಾಣಿ ಸಂಖ್ಯೆ ರದ್ದುಪಡಿಸಲು ಪ್ರಯತ್ನಿಸಲಾಗುತ್ತಿದ್ದು, ಪರ್ಯಾಯ ಸಂಖ್ಯೆ ನೀಡಲಾಗುವುದು ಎಂದು ಮಕ್ಕಳ ಹಕ್ಕು ರಕ್ಷಣೆಗೆ ಇರುವ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್)ದ ಅಧಿಕಾರಿ ತಿಳಿಸಿದ್ದಾರೆ. ಪ್ರತಿದಿನ ಕಾಮುಕರ ಕರೆಗಳು ಬರುತ್ತಿವೆ. ಆದುದರಿಂದ ನಾವು ಈ ಉಚಿತ ಸಹಾಯವಾಣಿ ಸಂಖ್ಯೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಅಶ್ಲೀಲ ವಿಚಾರಕ್ಕೆ ಸಂಬಂಧಿದ ಹುಡುಕಾಟದ ಸಂದರ್ಭ ಈ ದೂರವಾಣಿ ಸಂಖ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಕರೆ ಮಾಡುತ್ತಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿಯೊಂದಿಗಿನ ಮಾತುಕತೆ ಮೂಲಕ ತಿಳಿಯಿತು ಎಂದು ಅವರು ಹೇಳಿದ್ದಾರೆ. ಸೆಕ್ಸ್‌ನಂತಹ ಪದಗಳ ಜೊತೆಗೆ ಟ್ಯಾಗ್ ಮಾಡಿರುವುದರಿಂದ ಶೋಧ ಸಂದರ್ಭ ಈ ಸಹಾಯವಾಣಿ ಸಂಖ್ಯೆ ಸಿಗುತ್ತದೆ. ಅವರು ಸೆಕ್ಸ್ ಹಾಗೂ ಅದರ ಜೊತೆಗಿದ್ದ ಸಂಖ್ಯೆ ನೋಡುತ್ತಾರೆ. ಅನಂತರ ಲೈಂಗಿಕ ಸೇವೆಗಾಗಿ ಕರೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಎನ್‌ಸಿಪಿಸಿಆರ್ ರಾಜ್ಯ ಸ್ವಾಮಿತ್ವದ ಟೆಲಿಕಾಂ ಸೇವಾದಾರದಾರ ಎಂಟಿಎನ್‌ಎಲ್‌ನೊಂದಿಗೆ ನಿಂರತರ ಎಂದು ಎನ್‌ಸಿಪಿಸಿಆರ್ ಸದಸ್ಯ ಯಶ್ವಂತ್ ಜೈನ್ ತಿಳಿಸಿದ್ದಾರೆ.