ಶತಕದೊಂದಿಗೆ ಜಮೈಕಾ ತಂಡಕ್ಕೆ ಗೇಲ್ ವಿದಾಯ

Update: 2018-10-08 07:12 GMT

ಬಾರ್ಬಡೋಸ್, ಅ.7: ವೆಸ್ಟ್ ಇಂಡೀಸ್‌ನ ಸ್ಫೋಟಕ ದಾಂಡಿಗ ಕ್ರಿಸ್ ಗೇಲ್ ಎ’ ಲೀಸ್ಟ್ ಪಂದ್ಯದಲ್ಲಿ ಶತಕ ದಾಖಲಿಸುವ ಮೂಲಕ ಜಮೈಕಾ ತಂಡಕ್ಕೆ ವಿದಾಯ ಹೇಳಿದ್ದಾರೆ

ಬಾರ್ಬಡೋಸ್ ವಿರುದ್ಧ ಜಮೈಕಾ ತಂಡದ ಪರ ರೀಜನಲ್ ಸೂಪರ್ 50 ಪಂದ್ಯದಲ್ಲಿ ಗೇಲ್ ಶತಕ ದಾಖಲಿಸಿದರು.

 ‘‘ಕೊನೆಯ ಪಂದ್ಯದಲ್ಲಿ ಶತಕ ದಾಖಲಿಸಲು ಸಾಧ್ಯವಾಗಿರುವುದಕ್ಕೆ ಸಂತಸವಾಗಿದೆ’’ ಎಂದು ವಿದಾಯದ ಪಂದ್ಯದಲ್ಲಿ ಜಮೈಕಾ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದ ಗೇಲ್ ಅಭಿಪ್ರಾಯಪಟ್ಟರು. ‘‘ತಾನು ಕ್ರಿಕೆಟ್‌ನಲ್ಲಿ ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡ ಗೇಲ್ 25 ವರ್ಷಗಳ ಕಾಲ ಕ್ರಿಕೆಟ್ ಆಡಿರುವುದು ದೊಡ್ಡ ಸಾಧನೆಯಾಗಿದೆ ಎಂದರು.

ಗೇಲ್ 356 ‘ಎ’ ಲಿಸ್ಟ್ ಪಂದ್ಯಗಳನ್ನು ಆಡಿದ್ದಾರೆ. 38.14 ಸರಾಸರಿಯಂತೆ 12,436 ರನ್ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News