ಇಂಟರ್ ಪೋಲ್ ಅಧ್ಯಕ್ಷ ಮೆಂಗ್ ರಾಜೀನಾಮೆ

Update: 2018-10-08 07:19 GMT

ಹಾಂಗ್ ಕಾಂಗ್, ಅ.8: ಚೀನಾದಲ್ಲಿ ನಾಪತ್ತೆಯಾಗಿರುವ ಇಂಟರ್ ಪೋಲ್ ಅಧ್ಯಕ್ಷ ಮೆಂಗ್ ಹೊಂಗ್ ವೀ ಅವರ ರಾಜೀನಾಮೆಯನ್ನು ಸ್ವೀಕರಿಸಲಾಗಿದೆ ಎಂದು ಇಂಟರ್ ಪೋಲ್ ತಿಳಿಸಿದೆ.

ವಿಚಾರಣೆಯ ಭಾಗವಾಗಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಚೀನಾ ಹೇಳಿದ ನಂತರ ಇಂಟರ್ ಪೋಲ್ ಈ ಹೇಳಿಕೆಯನ್ನು ನೀಡಿದೆ. ಮೆಂಗ್ ಕಳೆದ ವಾರ ಚೀನಾದಲ್ಲಿ ಇಳಿದ ತಕ್ಷಣ ಪ್ರಶ್ನಿಸುವುದಕ್ಕಾಗಿ ಚೀನಿ ಅಧಿಕಾರಿಗಳು ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಮೂಲವೊಂದನ್ನು ಉಲ್ಲೇಖಿಸಿ ಹಾಂಕಾಂಗ್ ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News