ಅಮೆರಿಕದ ವಿಲಿಯಂ ನೊರ್ದೌಸ್, ಪೌಲ್ ರೊಮರ್‌ಗೆ 2018ರ ಅರ್ಥಶಾಸ್ತ್ರದ ನೋಬೆಲ್

Update: 2018-10-08 17:12 GMT

ಸ್ಟಾಕ್‌ಹೋಂ,ಅ.8: ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞರಾದ ವಿಲಿಯಂ ನೊರ್ದೌಸ್ ಮತ್ತು ಪೌಲ್ ರೊಮರ್‌ಗೆ 2018ನೇ ಸಾಲಿನ ಅರ್ಥಶಾಸ್ತ್ರ ವಿಜ್ಞಾನ ನೋಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹವಾಮಾನ ಬದಲಾವಣೆ ಮತ್ತು ಆವಿಷ್ಕಾರ ವಿಷಯದಲ್ಲಿ ನಡೆಸಿದ ಸಂಶೋಧನೆಗಾಗಿ ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿ ನೊರ್ದೌಸ್ ಮತ್ತು ರೊಮರ್‌ಗೆ ನೋಬೆಲ್ ನೀಡಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಈ ಪ್ರಶಸ್ತಿ ನೀಡುವ ಮೂಲಕ ಈ ವರ್ಷದ ನೋಬೆಲ್ ಪ್ರಶಸ್ತಿ ಪ್ರದಾನ ಸಮಾರಂಭಗಳ ಸರಣಿಗೆ ತೆರೆಬಿದ್ದಿದೆ. ನೋಬೆಲ್ ಅರ್ಥಶಾಸ್ತ್ರ ಪ್ರಶಸ್ತಿಯನ್ನು ಅಲ್ಫ್ರೆಡ್ ನೋಬೆಲ್ ಅವರ ಸ್ಮರಣಾರ್ಥವಾಗಿ ಸ್ವೀಡನ್‌ನ ಕೇಂದ್ರ ಬ್ಯಾಂಕ್ ಸ್ಥಾಪಿಸಿತ್ತು. ಈ ವಿಭಾಗದಲ್ಲಿ ಮೊದಲ ಪ್ರಶಸ್ತಿಯನ್ನು 1969ರಲ್ಲಿ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News