ಯೂತ್ ಒಲಿಂಪಿಕ್ಸ್: ಭಾರತಕ್ಕೆ ಚೊಚ್ಚಲ ಚಿನ್ನ ಗೆದ್ದುಕೊಟ್ಟ ವೇಟ್‌ಲಿಫ್ಟರ್ ಜೆರೆಮಿ

Update: 2018-10-09 04:35 GMT

ಬ್ಯುನಸ್ ಐರಿಸ್, ಅ.9: ವೇಟ್‌ಲಿಫ್ಟರ್ ಜೆರೆಮಿ ಲಾಲ್‌ರಿನ್ನಂಗ ಯೂತ್ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.

ಸೋಮವಾರ ತಡರಾತ್ರಿ ಅರ್ಜೆಂಟೀನದ ರಾಜಧಾನಿಯಲ್ಲಿ ನಡೆದ 62 ಕೆಜಿ ತೂಕ ವಿಭಾಗದಲ್ಲಿ 15ರ ಹರೆಯದ ಜೆರೆಮಿ ಒಟ್ಟು 274 ಕೆಜಿ(124-150ಕೆಜಿ)ತೂಕ ಎತ್ತಿ ಹಿಡಿಯುವ ಮೂಲಕ ಭಾರತದ ಪದಕ ಖಾತೆಗೆ ಚಿನ್ನ ಸೇರಿಸಿದರು.

ಟರ್ಕಿಯ ಟಾಪ್‌ಟಾಸ್ ಕಾನೆರ್ 263 ಕೆಜಿ(122ಕೆಜಿ+141ಕೆಜಿ) ಎತ್ತಿ ಹಿಡಿದು ಬೆಳ್ಳಿ ಪದಕ ಜಯಿಸಿದರು. ಕೊಲಂಬಿಯಾದ ವಿಲ್ಲಾರ್ ಎಸ್ಟಿವೆನ್ ಜೋಸ್(122+141ಕೆಜಿ=260ಕೆಜಿ)ಕಂಚು ಜಯಿಸಿದರು.

 ವಿಶ್ವ ಯೂತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಮಿರೆರಾಂ ವೇಟ್‌ಲಿಫ್ಟರ್ ಅಕ್ಟೋಬರ್ 26ಕ್ಕೆ 16ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಭಾರತದ ಭವಿಷ್ಯದ ವೇಟ್‌ಲಿಫ್ಟರ್ ಆಗಿ ರೂಪುಗೊಳ್ಳುತ್ತಿರುವ ಜೆರೆಮಿ ಈ ವರ್ಷಾರಂಭದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ರಾಷ್ಟ್ರೀಯ ದಾಖಲೆ ಮುರಿಯುವುದರೊಂದಿಗೆ ಬೆಳ್ಳಿ(ಯೂತ್) ಹಾಗೂ ಕಂಚಿನ(ಜೂನಿಯರ್)ಪದಕ ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News