ಕಾನ್ಸುಲೇಟ್ ಶೋಧಕ್ಕೆ ಸೌದಿ ಸಮ್ಮತಿ: ಟರ್ಕಿ

Update: 2018-10-09 17:08 GMT

ಅಂಕಾರ, ಅ. 9: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಕಳೆದ ವಾರ ಇಸ್ತಾಂಬುಲ್‌ನಲ್ಲಿರುವ ಸೌದಿ ಕಾನ್ಸುಲೇಟ್ ಕಚೇರಿಯಲ್ಲಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಟರ್ಕಿ ಅಧಿಕಾರಿಗಳು ಕಾನ್ಸುಲೇಟ್ ಕಚೇರಿಯಲ್ಲಿ ಶೋಧ ನಡೆಸಲು ಸೌದಿ ಒಪ್ಪಿಗೆ ನೀಡಿದೆ ಎಂದು ಟರ್ಕಿ ವಿದೇಶ ಸಚಿವಾಲಯ ಮಂಗಳವಾರ ತಿಳಿಸಿದೆ.

ಅಧಿಕೃತ ತನಿಖೆಯ ಭಾಗವಾಗಿ ಸೌದಿ ಕಾನ್ಸುಲೇಟ್ ಕಚೇರಿಯಲ್ಲಿ ಶೋಧ ನಡೆಸಲಾಗುವುದು ಹಾಗೂ ತನಿಖೆಯನ್ನು ತೀವ್ರ ಗತಿಯಲ್ಲಿ ನಡೆಸಲಾಗುವುದು ಎಂದು ಟರ್ಕಿ ವಿದೇಶ ಸಚಿವಾಲಯದ ವಕ್ತಾರರೊಬ್ಬರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ವಿವಾಹ ವಿಚ್ಛೇದನೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಕಳೆದ ವಾರ ಮಂಗಳವಾರ ಕಾನ್ಸುಲೇಟ್ ಕಚೇರಿಗೆ ಹೋಗಿದ್ದ ಜಮಾಲ್ ನಾಪತ್ತೆಯಾಗಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News