ಆಂಧ್ರದ ಶ್ರೀಕಾಕುಳಂನಲ್ಲಿ ತಿತ್ಲಿ ಅಬ್ಬರ; ಭೂ ಕುಸಿತಕ್ಕೆ ಇಬ್ಬರು ಬಲಿ

Update: 2018-10-11 05:52 GMT

ಹೈದರಾಬಾದ್ , ಅ.11:ಹೈದರಾಬಾದ್ , ಅ.11: ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸಾಕ್ಕೆ  ತಿತ್ಲಿ ಚಂಡ ಮಾರುತ ಅಪ್ಪಳಿಸಿದ್ದು , ಚಂಡ ಮಾರುತದ  ಅಬ್ಬರಕ್ಕೆ ಹಲವು ರಸ್ತೆಗಳು  ಕೊಚ್ಚಿ ಹೋಗಿವೆ. ಪಲಾಸಾದಲ್ಲಿ ಭೂ ಕುಸಿತಕ್ಕೆ ಇಬ್ಬರು ಬಲಿಯಾಗಿದ್ದಾರೆ.

ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ.  ಗಾಳಿಗೆ ಹಲವು ಮನೆಗಳಿಗೆ ಹಾನಿಯಾಗಿದೆ. ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ವಿಮಾನಗಳ ಹಾರಾಟ ,  ರೈಲುಗಳ ಓಡಾಟ ಸ್ಥಗಿತಗೊಂಡಿದೆ.ಹಲವಡೆ  ವಿದ್ಯುತ್ ಸಂಪರ್ಕ ಕಡಿದು ಹೋಗಿದೆ. 

ತಿತ್ಲಿ ಚಂಡಮಾರುತದ ಪರಿಣಾಮ  ಗಂಜಾಂ, ಗಜಪತಿ, ಪೂರಿ, ಕುರ್ದಾ, ಜಗತ್ ಸಿಂಗ್ ಪುರ್ ಮೊದಲಾದ  ಐದು ಜಿಲ್ಲೆಗಳಲ್ಲಿ ಬೀರುಗಾಳಿ ಸಹಿತ ಮಳೆಯಾಗುತ್ತಿದೆ  .

ಚಂಡಮಾರುತದಿಂದಾಗಿ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದಿವೆ. ಕೆಲ ಮನೆಗಳಿಗೆ ಹಾನಿಯಾಗಿದೆ. ಗೋಪಾಲ್ಪುರ , ಮೊದಲಾದ ಕಡೆಗಳಲ್ಲಿ ರಸ್ತೆ ಸಂಪರ್ಕ  ಅಸ್ತವ್ಯಸ್ತಗೊಂಡಿದೆ.

ಗುರುವಾರ ಮುಂಜಾನೆಯಿಂದ ಒಡಿಶಾದ ಗಂಜಾಂ ಜಿಲ್ಲೆಯ ಗೋಪಾಲ್ಪುರದಲ್ಲಿ ಗಂಟೆಗೆ 126 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ  ಚಂಡಮಾರುತದಿಂದಾಗಿ  ಅನೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದೆ 

ಒಡಿಶಾದ 5 ಜಿಲ್ಲೆಗಳಲ್ಲಿ ತಗ್ಗುಪ್ರದೇಶದಲ್ಲಿ ವಾಸಿಸುತ್ತಿರುವ  ಲಕ್ಷಾಂತರ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News