ಇಂಡೋನೇಶ್ಯ ಭೂಕಂಪ: ಇನ್ನೂ 5,000 ಮಂದಿ ನಾಪತ್ತೆ

Update: 2018-10-11 16:21 GMT

ಪಲು (ಇಂಡೋನೇಶ್ಯ), ಅ. 11: ಇಂಡೋನೇಶ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕಂಪ ಮತ್ತು ಸುನಾಮಿಯಿಂದಾಗಿ ಸುಮಾರು 5,000 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ.

ಆದಾಗ್ಯೂ, ನಾಪತ್ತೆಯಾದವರಿಗಾಗಿ ನಡೆಸಲಾಗುತ್ತಿದ್ದ ಶೋಧ ಕಾರ್ಯಾಚರಣೆಯನ್ನು ಗುರುವಾರ ನಿಲ್ಲಿಸಲಾಗಿದೆ.

ಇಂಡೋನೇಶ್ಯದ ಸುಲವೆಸಿ ದ್ವೀಪದ ಸಮುದ್ರದಲ್ಲಿ ಸೆಪ್ಟಂಬರ್ 28ರಂದು ಸಂಭವಿಸಿದ ಭೂಕಂಪ ಹಾಗೂ ಬಳಿಕ ಅಪ್ಪಳಿಸಿದ ಸುನಾಮಿಯು ಪಲು ನಗರದ ಒಂದು ಭಾಗವನ್ನು ಸರ್ವನಾಶ ಮಾಡಿದೆ.

ಈವರೆಗೆ 2,000ಕ್ಕೂ ಅಧಿಕ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ.

ಆದರೆ, ಧ್ವಂಸಗೊಂಡ ನಗರದ ಅಡಿಯಲ್ಲಿ ಇನ್ನೂ 5,000 ಮಂದಿ ಹೂತು ಹೋಗಿರಬಹುದು ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕೆಲವು ಭಾಗಗಳಲ್ಲಿ, ಇಡೀ ಗ್ರಾಮಗಳೇ ಭೂಮಿಯಲ್ಲಿ ಹೂತುಹೋಗಿವೆ.

ಪಲು ನಗರದಲ್ಲಿ ಸುಮಾರು 2 ಲಕ್ಷ ಮಂದಿ ತುರ್ತು ಮಾನವೀಯ ನೆರವಿನ ಅಗತ್ಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಜಾವಾ ದ್ವೀಪದಲ್ಲಿ ಭೂಕಂಪ: 3 ಸಾವು

ಇಂಡೋನೇಶ್ಯದ ಜಾವಾ ದ್ವೀಪದಲ್ಲಿ ಗುರುವಾರ ಹೊಸದಾಗಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.

ಭೂಕಂಪದ ಪರಿಣಾಮವಾಗಿ ಪ್ರವಾಸಿ ಕೇಂದ್ರ ಬಾಲಿ ನಡುಗಿದೆ.

ಸಿಟುಬೊಂಡೊ ನಗರದ ಈಶಾನ್ಯಕ್ಕೆ 55 ಕಿ.ಮೀ. ದೂರದಲ್ಲಿ ಸಮುದ್ರದಲ್ಲಿ ಭೂಕಂಪದ ಕೇಂದ್ರ ಬಿಂದುವಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News