ಇರಾನ್‌ನಿಂದ ತೈಲ ಆಮದು ಮಾಡುವ ದೇಶಗಳನ್ನು ನೋಡಿಕೊಳ್ಳುತ್ತೇವೆ: ಟ್ರಂಪ್

Update: 2018-10-11 16:26 GMT

ವಾಶಿಂಗ್ಟನ್, ಅ. 11:  ನವೆಂಬರ್ 4ರ ಬಳಿಕ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂಬ ಅಮೆರಿಕದ ಸೂಚನೆಯನ್ನು ಧಿಕ್ಕರಿಸುವ ದೇಶಗಳನ್ನು ಅಮೆರಿಕ ‘ನೋಡಿಕೊಳ್ಳುತ್ತದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಎರಡು ಕಂಪೆನಿಗಳು ಇರಾನ್‌ನಿಂದ ತೈಲ ಆಮದಿಗಾಗಿ ಬೇಡಿಕೆಗಳನ್ನು ಸಲ್ಲಿಸಿವೆ ಎಂಬುದಾಗಿ ಭಾರತ ಘೋಷಿಸಿದ ದಿನಗಳ ಬಳಿಕ ಈ ಎಚ್ಚರಿಕೆ ಹೊರಬಿದ್ದಿದೆ.

ಇರಾನ್‌ನಿಂದ ತೈಲ ಆಮದನ್ನು ಮುಂದುವರಿಸಲು ಭಾರತ ಮತ್ತು ಚೀನಾ ಸೇರಿದಂತೆ ಕೆಲವು ದೇಶಗಳು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಟ್ರಂಪ್, ‘‘ಅವರನ್ನು ನಾವು ನೋಡಿಕೊಳ್ಳುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News