ಮರುಶಿಕ್ಷಣ ಶಿಬಿರಗಳನ್ನು ಅಧಿಕೃತಗೊಳಿಸಿದ ಚೀನಾ

Update: 2018-10-12 16:31 GMT

ಬೀಜಿಂಗ್, ಅ. 12: ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿನ ವಿವಾದಾಸ್ಪದ ಮರುಶಿಕ್ಷಣ ಶಿಬಿರಗಳನ್ನು ಚೀನಾ ಕಾನೂನುಬದ್ಧಗೊಳಿಸಿದೆ ಹಾಗೂ ಅವುಗಳಿಗೆ ‘ವೃತ್ತಿ ತರಬೇತಿ ಸಂಸ್ಥೆ’ ಎಂಬುದಾಗಿ ಮರುನಾಮಕರಣ ಮಾಡಿದೆ.

‘‘ಉಗ್ರವಾದದಿಂದ ಪ್ರಭಾವಿತರಾಗಿರುವ ಜನರಿಗೆ ಶಿಕ್ಷಣ ನೀಡಿ ಪರಿವರ್ತನೆಗೊಳಿಸಲು ಕೌಂಟಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಮಟ್ಟಗಳಲ್ಲಿರುವ ಸರಕಾರಗಳು ಶಿಕ್ಷಣ ಮತ್ತು ಪರಿವರ್ತನೆ ಸಂಸ್ಥೆಗಳನ್ನು ಹಾಗೂ ವೃತ್ತಿ ತರಬೇತಿ ಕೇಂದ್ರಗಳಂಥ ಮೇಲ್ವಿಚಾರಣಾ ಇಲಾಖೆಗಳನ್ನು ಸ್ಥಾಪಿಸಬಹುದಾಗಿದೆ’’ ಎಂದು ಹಾಂಕಾಂಗ್‌ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.

ವೃತ್ತಿ ತರಬೇತಿ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳು ಹೆಚ್ಚು ದೇಶಭಕ್ತರಾಗಲು ಅವರಿಗೆ ಮನೋವೈಜ್ಞಾನಿಕ ಚಿಕಿತ್ಸೆ ನೀಡುವವು ಎಂದು ಪತ್ರಿಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News