ಎಂ.ಜೆ ಅಕ್ಬರ್ ವಿರುದ್ಧದ ಆರೋಪಗಳನ್ನು ಪರಿಶೀಲಿಸಲಾಗುವುದು: ಅಮಿತ್ ಶಾ

Update: 2018-10-13 07:03 GMT
ಎಂ ಜೆ ಅಕ್ಬರ್ 

ಹೈದರಾಬಾದ್, ಅ. 13: ವಿದೇಶಾಂಗ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ಎಂ ಜೆ ಅಕ್ಬರ್ ಅವರನ್ನು ತಟ್ಟಿರುವ #ಮೀ ಟೂ ಕಳಂಕದ ಬಿಸಿ ಬಿಜೆಪಿಗೆ ತಟ್ಟಿದೆ. ಅವರು ವಿವಿಧ ಪತ್ರಿಕೆಗಳ ಸಂಪಾದಕರಾಗಿದ್ದ ವೇಳೆ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಹೊರಿಸಿರುವುದನ್ನು ಕೇಂದ್ರದ ಬಿಜೆಪಿ ನಾಯಕತ್ವ ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯಿಸಿ ಆರೋಪಗಳನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ.

ಅದೇ ಸಮಯ ಆರೋಪಗಳ ಸತ್ಯಾಸತ್ಯತೆಯನ್ನೂ ತಿಳಿಯಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ''ಆರೋಪಗಳನ್ನು ಯಾರು ಹೊರಿಸಿದ್ದಾರೆಂಬುದನ್ನೂ ಗಮನಿಸಬೇಕಾಗಿದೆ. ನನ್ನ ಹೆಸರು ಕೂಡ ಹಾಕಿ ಏನಾದರೂ ಬರೆಯಬಹುದು,'' ಎಂದರಲ್ಲದೆ  ಖಂಡಿತ ಈ ವಿಚಾರವನ್ನು ಪರಿಶೀಲಿಸುವುದಾಗಿ ಮತ್ತೊಮ್ಮೆ ಹೇಳಿದ್ದಾರೆ. ಈಗಾಗಲೇ ಬಿಜೆಪಿ ವಲಯದಲ್ಲಿ ಅಕ್ಬರ್ ಅವರು ಸಚಿವ ಹುದ್ದೆಯಲ್ಲಿ ಮುಂದುವರಿದಲ್ಲಿ ತಪ್ಪು ಸಂದೇಶ ರವಾನಿಸಿದಂತಾಗುವುದು ಎಂಬ ಅಭಿಪ್ರಾಯವಿದೆ.

ಅಕ್ಬರ್ ಅವರ ವಿರುದ್ಧದ ಆರೋಪಗಳು ಸಾಬೀತಾದರೆ ಅವರು  ರಾಜೀನಾಮೆ ನೀಡಬೇಕೆಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಥಾವಳೆ ಹೇಳಿದ್ದಾರೆ. ಆರೋಪಗಳು ಗಂಭೀರವಾಗಿದ್ದು ಕ್ರಮ ಕೈಗೊಳ್ಳುವುದು ಬಿಜೆಪಿಗೆ ಬಿಟ್ಟಿದ್ದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News