ಪತ್ರಕರ್ತ ನಿಗೂಢ ನಾಪತ್ತೆ ಪ್ರಕರಣ: ಸೌದಿಗೆ ‘ಕಠಿಣ ಶಿಕ್ಷೆ’ಯ ಎಚ್ಚರಿಕೆ ನೀಡಿದ ಟ್ರಂಪ್

Update: 2018-10-13 17:06 GMT

ವಾಷಿಂಗ್ಟನ್, ಅ.13: ಇಸ್ತಾಂಬುಲ್ ಕಾನ್ಸುಲೇಟ್ ಒಳಗೆ ಪತ್ರಕರ್ತ ಜಮಾಲ್ ರನ್ನು ಹತ್ಯೆಗೈದಿರುವುದು ದೃಢಪಟ್ಟರೆ ‘ಕಠಿಣ ಶಿಕ್ಷೆ’ ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೇಬಿಯಾಗೆ ಎಚ್ಚರಿಕೆ ನೀಡಿದ್ದಾರೆ.

ಕಾನ್ಸುಲೇಟ್ ಕಚೇರಿಯೊಳಗಡೆ ತೆರಳಿದ್ದ ನಂತರ ಜಮಾಲ್ ಖಶೋಗಿ ನಾಪತ್ತೆಯಾದ ಪ್ರಕರಣ ಭಾರೀ ವಿವಾದವನ್ನೇ ಸೃಷ್ಟಿಸಿದೆ. ಜಮಾಲ್ ತನ್ನ ಕೊನೆಯ ಕ್ಷಣಗಳನ್ನು ಆ್ಯಪಲ್ ವಾಚ್ ನಲ್ಲಿ ರೆಕಾರ್ಡ್ ಮಾಡಿದ್ದರು ಎಂದು ಟರ್ಕಿ ಮಾಧ್ಯಮವೊಂದು ವರದಿ ಮಾಡಿತ್ತು.

 ಅಕ್ಟೋಬರ್ 2ರಂದು ಕಾನ್ಸುಲೇಟ್ ಕಚೇರಿಯನ್ನು ಪ್ರವೇಶಿಸುವ ಮೊದಲು ಅವರು ತಾನು ಧರಿಸಿದ್ದ ಆ್ಯಪಲ್ ವಾಚ್‌ನಲ್ಲಿ ‘ರೆಕಾರ್ಡಿಂಗ್’ಗೆ ಚಾಲನೆ ನೀಡಿದ್ದರು ಎಂದು ‘ಸಬಾ’ ಪತ್ರಿಕೆಯನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News