ಇನ್ನು ಬ್ರಿಟನ್ ವೀಸಾ ಭಾರತೀಯರಿಗೆ ದುಬಾರಿ

Update: 2018-10-13 17:16 GMT

ಲಂಡನ್, ಅ. 13: ಭಾರತ ಮತ್ತು ಐರೋಪ್ಯ ಒಕ್ಕೂಟೇತರ ದೇಶಗಳ ನಾಗರಿಕರಿಗೆ ನೀಡಲಾಗುವ ಬ್ರಿಟನ್ ವೀಸಾಗಳ ಒಟ್ಟಾರೆ ವೆಚ್ಚ ಡಿಸೆಂಬರ್ ತಿಂಗಳಿಂದ ಹೆಚ್ಚಲಿದೆ.

ವಲಸಿಗರ ಆರೋಗ್ಯ ಮೇಲ್ತೆರಿಗೆ (ಐಎಚ್‌ಎಸ್)ಯನ್ನು ಹೆಚ್ಚಿಸಲು ತೆಗೆದುಕೊಂಡಿರುವ ನಿರ್ಧಾರದ ಭಾಗವಾಗಿ ಈ ಹೆಚ್ಚಳ ಮಾಡಲಾಗಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ನೀಡಲಾಗುವ ವೀಸಾಗಳಿಗೆ ಈ ಹೆಚ್ಚಳ ಅನ್ವಯವಾಗಲಿದೆ.

ಪ್ರಸಕ್ತ ಆರೋಗ್ಯ ಮೇಲ್ತೆರಿಗೆ ವರ್ಷಕ್ಕೆ 200 ಪೌಂಡ್ (ಸುಮಾರು 19,385 ರೂಪಾಯಿ) ಆಗಿದೆ. ಅದನ್ನು ಇನ್ನು ವರ್ಷಕ್ಕೆ 400 ಪೌಂಡ್ (ಸುಮಾರು 38,770 ರೂಪಾಯಿ)ಗೆ ಹೆಚ್ಚಿಸಲಾಗುವುದು.

ಆದಾಗ್ಯೂ, ವಿದ್ಯಾರ್ಥಿಗಳು ಮತ್ತು ‘ಯೂತ್ ಮೊಬಿಲಿಟಿ ಯೋಜನೆ’ಯನ್ವಯ ಬ್ರಿಟನ್‌ಗೆ ಬರುವವರಿಗೆ ವರ್ಷಕ್ಕೆ 300 ಪೌಂಡ್ (ಸುಮಾರು 29,078) ರಿಯಾಯಿತಿ ದರವನ್ನು ವಿಧಿಸಲಾಗುವುದು ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ವಲಸಿಗರ ಆರೋಗ್ಯ ಮೇಲ್ತೆರಿಗೆಯನ್ನು 2015ರಲ್ಲಿ ಜಾರಿಗೆ ತರಲಾಗಿದೆ. ಇದು ವಲಸಿಗರು ಬ್ರಿಟನ್‌ನಲ್ಲಿ ವಾಸವಿರುವವರೆಗೆ ರಾಷ್ಟ್ರೀಯ ಆರೋಗ್ಯ ಸೇವೆಯನ್ನು ಪಡೆಯಲು ಅವರಿಗೆ ಅನುವು ಮಾಡಿಕೊಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News