ನೇಪಾಳ: ನೀರ್ಗಲ್ಲಿನಲ್ಲಿ ಕೊಚ್ಚಿಹೋದ 9 ಪರ್ವತಾರೋಹಿಗಳು

Update: 2018-10-13 17:18 GMT

 ಕಠ್ಮಂಡು (ನೇಪಾಳ), ಅ. 13: ನೇಪಾಳದ ಗುರ್ಜ ಹಿಮಾಲ್ ಪರ್ವತದಲ್ಲಿರುವ ತಳ ಶಿಬಿರವೊಂದಕ್ಕೆ ನೀರ್ಗಲ್ಲು ಅಪ್ಪಳಿಸಿದಾಗ ಅದರಲ್ಲಿದ್ದ ಕನಿಷ್ಠ 9 ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಅವರ ಪರ್ವತಾರೋಹಣವನ್ನು ಆಯೋಜಿಸಿದ ‘ಟ್ರೆಕ್ಕಿಂಗ್ ಕ್ಯಾಂಪ್ ನೇಪಾಳ್’ ಹೇಳಿದೆ.

ಮೃತರಲ್ಲಿ ಐವರು ದಕ್ಷಿಣ ಕೊರಿಯನ್ನರು ಹಾಗೂ ನಾಲ್ವರು ನೇಪಾಳಿಯರು.

ಶುಕ್ರವಾರ ಸಂಜೆ ಅಪ್ಪಳಿಸಿದ ನೀರ್ಗಲ್ಲಿಗೆ ಅವರು ಬಲಿಯಾದರು ಎಂದು ‘ದ ಹಿಮಾಲಯನ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.

ಅವರು ಅಕ್ಟೋಬರ್ 7ರಂದು ಪರ್ವತಾರೋಹಣವನ್ನು ಆರಂಭಿಸಿದ್ದರು.

ಅವರು 3,500 ಮೀಟರ್ ಎತ್ತರದಲ್ಲಿ ಉತ್ತಮ ಹವಾಮಾನಕ್ಕಾಗಿ ತಳ ಶಿಬಿರದಲ್ಲಿ ಕಾಯುತ್ತಿದ್ದರು ಎಂದು ಟ್ರೆಕ್ಕಿಂಗ್ ಕ್ಯಾಂಪ್ ನೇಪಾಳ್‌ನ ಆಡಳಿತ ನಿರ್ದೇಶಕ ವಾಂಗ್ಚು ಶೆರ್ಪಾ ತಿಳಿಸಿದರು.

ಶನಿವಾರ ಬೆಳಗ್ಗೆ ರಕ್ಷಣಾ ಹೆಲಿಕಾಪ್ಟರೊಂದನ್ನು ಪ್ರದೇಶಕ್ಕೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News