ಎರಡನೇ ಏಕದಿನ: ಇಂಗ್ಲೆಂಡ್ ಜಯಭೇರಿ

Update: 2018-10-14 18:46 GMT

ಡಾಂಬುಲ್ಲಾ(ಶ್ರೀಲಂಕಾ), ಅ.14: ನಾಯಕ ಇಯಾನ್ ಮೊರ್ಗನ್ ಅರ್ಧಶತಕ ಕೊಡುಗೆಯ(92)ನೆರವಿನಿಂದ ಮಳೆಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ 35 ರನ್‌ಗಳಿಂದ ಜಯ ಸಾಧಿಸಿದೆ.

ಡಾಂಬುಲ್ಲಾ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 278 ರನ್ ಗಳಿಸಿತು. ಶ್ರೀಲಂಕಾ 29 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 140 ರನ್ ಗಳಿಸಿದ್ದಾಗ ಮಳೆ ಆಗಮಿಸಿತು. ಅಂಪೈರ್ ಪಂದ್ಯವನ್ನು ನಿಲ್ಲಿಸಿದರು. ಪಂದ್ಯ ನಿಂತಾಗ ತಿಸಾರ ಪೆರೇರ(44) ಹಾಗೂ ಧನಂಜಯ ಡಿಸಿಲ್ವಾ(36) ಕ್ರೀಸ್‌ನಲ್ಲಿದ್ದರು. ಶ್ರೀಲಂಕಾ 74 ರನ್‌ಗೆ 5 ವಿಕೆಟ್ ಕಳೆದುಕೊಂಡಾಗ ತಂಡಕ್ಕೆ ಆಸರೆಯಾದ ಪೆರೇರ ಹಾಗೂ ಡಿಸಿಲ್ವಾ 6ನೇ ವಿಕೆಟ್‌ಗೆ 66 ರನ್ ಜೊತೆಯಾಟ ನಡೆಸಿದರು. ಕ್ರಿಸ್ ವೋಕ್ಸ್(3-26)ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಮಳೆ ಮುಂದುವರಿದ ಕಾರಣ ಡಕ್‌ವರ್ತ್-ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್‌ಗೆ ಗೆಲುವು ಒಲಿಯಿತು.

ಬುಧವಾರ ಉಭಯ ತಂಡಗಳ ನಡುವೆ ನಡೆದ ಮೊದಲ ಏಕದಿನ ಪಂದ್ಯ ಕೇವಲ 15 ಓವರ್‌ಗಳಲ್ಲಿ ಕೊನೆಗೊಂಡಿತ್ತು. ಮಳೆಯಿಂದಾಗಿ ಈ ಪಂದ್ಯದಲ್ಲಿ ಫಲಿತಾಂಶ ದಾಖಲಾಗಲಿಲ್ಲ.

 ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಮೊರ್ಗನ್ 92(112 ಎಸೆತ, 11 ಬೌಂಡರಿ, 2 ಸಿಕ್ಸರ್) ಹಾಗೂ ರೂಟ್ 71 ರನ್ (83 ಎಸೆತ, 6 ಬೌಂಡರಿ)ಕೊಡುಗೆ ನೀಡಿ ತಂಡ ಉತ್ತಮ ಮೊತ್ತ ದಾಖಲಿಸಲು ನೆರವಾದರು. ವನ್‌ಡೌನ್ ಆಟಗಾರ ರೂಟ್ 2ನೇ ವಿಕೆಟ್‌ಗೆ ಬೈರ್‌ಸ್ಟೋವ್‌ರೊಂದಿಗೆ 72 ರನ್ ಜೊತೆಯಾಟ ನಡೆಸಿದರು. ಆ ಬಳಿಕ ನಾಯಕ ಮೊರ್ಗನ್‌ರೊಂದಿಗೆ 3ನೇ ವಿಕೆಟ್‌ಗೆ 68 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಶ್ರೀಲಂಕಾದ ಪರ ವೇಗದ ಬೌಲರ್ ಲಸಿತ ಮಾಲಿಂಗ 44 ರನ್‌ಗೆ 5 ವಿಕೆಟ್ ಗೊಂಚಲು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News