ತವರಿನಲ್ಲಿ ಉಮೇಶ್‌ ಅಪೂರ್ವ ಸಾಧನೆ

Update: 2018-10-14 18:49 GMT

ಹೈದರಾಬಾದ್, ಅ.14: ಎರಡನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದ ಉಮೇಶ್ ಯಾದವ್ ಭಾರತ ವಿಕೆಟ್ ನಷ್ಟವಿಲ್ಲದೆ ಭರ್ಜರಿ ಜಯ ಸಾಧಿಸಲು ನೆರವಾಗಿದ್ದಾರೆ.

ರಾಜೀವ್‌ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ವಿಂಡೀಸ್ ದಾಂಡಿಗರನ್ನು ಕಾಡಿದ ಯಾದವ್ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಹಾಗೂ ಎರಡನೇ ಇನಿಂಗ್ಸ್ ನಲ್ಲಿ 4 ವಿಕೆಟ್ ಪಡೆದು 10 ವಿಕೆಟ್ ಗೊಂಚಲು ಪಡೆದರು.

30ರ ಹರೆಯದ ಯಾದವ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ 10 ವಿಕೆಟ್ ಗೊಂಚಲು ಪಡೆದ ಭಾರತದ ಮೂರನೇ ವೇಗದ ಬೌಲರ್ ಎನಿಸಿಕೊಂಡರು.

 ಭಾರತದ ಲೆಜೆಂಡ್ ಕಪಿಲ್‌ದೇವ್ 1980ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿ ಈ ಮೈಲುಗಲ್ಲು ತಲುಪಿದ್ದರು. ಮೂರು ವರ್ಷಗಳ ಬಳಿಕ ಕಪಿಲ್‌ದೇವ್ ಅಹ್ಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆಯನ್ನು ಪುನರಾವರ್ತಿಸಿದರು.

1999ರಲ್ಲಿ ಜಾವಗಲ್ ಶ್ರೀನಾಥ್ ಕೋಲ್ಕತಾದಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ ಭಾರತದ ಎರಡನೇ ಬೌಲರ್ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News