ನಾಲ್ಕನೇ ಬಾರಿ ಶಾಂಘೈ ಟ್ರೋಫಿ ಜಯಿಸಿದ ಜೊಕೊವಿಕ್

Update: 2018-10-14 18:50 GMT

ಶಾಂಘೈ, ಅ.14: ಅತ್ಯುತ್ತಮ ಫಾರ್ಮ್ ಮುಂದುವರಿಸಿದ ನೊವಾಕ್ ಜೊಕೊವಿಕ್ ಶಾಂಘೈ ಮಾಸ್ಟರ್ಸ್ ಟೂರ್ನಿಯಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದರು.

ಇಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಜೊಕೊವಿಕ್ ಕ್ರೊಯೇಶಿಯದ ಬೊರ್ನಾ ಕೊರಿಕ್‌ರನ್ನು 6-3, 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು. ಕೊರಿಕ್ ಸೆಮಿ ಫೈನಲ್‌ನಲ್ಲಿ ರೋಜರ್ ಫೆಡರರ್‌ರನ್ನು ಸೋಲಿಸಿ ಗಮನ ಸೆಳೆದಿದ್ದರು. ಈ ವರ್ಷ ವಿಂಬಲ್ಡನ್ ಹಾಗೂ ಯುಎಸ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಜೊಕೊವಿಕ್ ಈ ಋತುವಿನಲ್ಲಿ ನಾಲ್ಕನೇ ಪ್ರಶಸ್ತಿ ತನ್ನದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News