‘ಅತ್ಯಂತ ಸ್ವಚ್ಛ ನಗರ’ವಾಗಿ ಮೈ ಸೂರು ಮತ್ತು ‘ಸ್ವಚ್ಛ ಭಾರತ’ದ ಕನಸು

Update: 2018-10-15 10:33 GMT

ಶೌಚಾಲಯ ಎಲ್ಲಿದೆ ಎಂದು ಹೇಳುವ ಆ್ಯಪ್
ನಗರ ಪಾಲಿಕೆಯು ಜನ ನಿಬಿಡ ಪ್ರದೇಶಗಳಲ್ಲಿ 80 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದೆ. ಪ್ರವಾಸಿಗರು ಈ ಶೌಚಾಲಯ ಗಳನ್ನು ಒಂದು ‘ಟ್ಯಾಲೆಟ್ ಲೊಕೇಟರ್ ಆ್ಯಪ್’ ಮೂಲಕ ಕಂಡು ಹಿಡಿಯಬಹುದಾಗಿದೆ.

ಅದಕ್ಕೆ ಯಾವ ಮಂತ್ರದಂಡವೂ ಇಲ್ಲ ಅದಕ್ಕೆ ಬೇಕಾಗಿರುವುದು ಸದಾ ಸನ್ನದ್ಧವಾಗಿರುವ ಒಂದು ದೊಡ್ಡ ಕಾರ್ಯಪಡೆ, ಸದಾ ಯಾವಾಗಲೂ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಅಧಿಕಾರಿಗಳು, ಘನ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸುವ ಜಿಪಿಎಸ್ ಅಳವಡಿಸಲಾದ ವಾಹನಗಳ ಸಾಲು ಮತ್ತು ನಗರಾಡಳಿತಕ್ಕೆ ಬೆಂಬಲ ನೀಡುವಂತೆ ಪ್ರೇರೇಪಿಸುವ ಸಾಕಷ್ಟು ಸಂಖ್ಯೆಯ ಎನ್‌ಜಿಒಗಳು. ಈಗಾಗಲೇ ಹಲವು ಬಾರಿ ಸ್ವಚ್ಛ ನಗರಗಳ ಯಾದಿಯಲ್ಲಿ ಉನ್ನತ ಸ್ಥಾನವನ್ನು ಪಡೆದಿರುವ ಮೈಸೂರು, ಮೈಸೂರು ನಗರ ಪಾಲಿಕೆಯ ಭಾರೀ ಪ್ರಯತ್ನಗಳಿಂದಾಗಿಯೇ ಆ ಉನ್ನತ ಸ್ಥಾನವನ್ನು ಪಡೆಯುವುದು ಸಾಧ್ಯವಾಗಿದೆ.
ವರ್ಷದ ಉದ್ದಕ್ಕೂ ಒಟ್ಟು ಸುಮಾರು 30 ಲಕ್ಷ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ. ಮೈಸೂರಿನ ಜನಸಂಖ್ಯೆ ಸುಮಾರು ಹತ್ತು ಲಕ್ಷ. ಮಾಮೂಲಿ ಪ್ರವಾಸಿಗರಲ್ಲದೇ, ಈಗ ಒಂದು ಶೈಕ್ಷಣಿಕ, ವಾಣಿಜ್ಯ ಹಾಗೂ ಔದ್ಯಮಿಕ ಕೇಂದ್ರವಾಗಿರುವ ಈ ನಗರಕ್ಕೆ ದಿನವೊಂದರ ಸುಮಾರು ಲಕ್ಷ ಸಂದರ್ಶಕರು ಆಗಮಿಸುತ್ತಾರೆ. ನಗರದ ಆಕರ್ಷಣೆಯನ್ನು ಉಳಿಸಿಕೊಳ್ಳಲು ಎಮ್‌ಸಿಸಿ(ಮೈಸೂರು ಸಿಟಿ ಕಾರ್ಪೊರೇಷನ್), ಬೆಳಗಿನ ಜಾವದಿಂದಲೇ ಬೆಂಗಳೂರಿನಿಂದ ಟ್ರೈನು ಮತ್ತು ಬಸ್ಸುಗಳಲ್ಲಿ ಬಂದಿಳಿಯುವ ಸಂದರ್ಶಕರ ಹಾಗೂ ಪ್ರವಾಸಿಗರ ಸೇವೆಗೆ ಸಿದ್ಧವಾಗುತ್ತದೆ.
ಎಲ್ಲರಿಗೂ ನಳ್ಳಿನೀರು
ನಳ್ಳಿ ನೀರಿನ ಪೂರೈಕೆ ಮತ್ತು ಒಳಚರಂಡಿ ಯೋಜನೆಗಳು ಹಾಗೂ ಸೂಕ್ತ ರೀತಿಯಲ್ಲಿ ತ್ಯಾಜ್ಯಗಳ ನಿರ್ವಹಣೆ ಮೈಸೂರು ನಗರದ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯದ ಕೀಲಿ ಕೈ ಆಗಿದೆ. ನಗರದ ಮನೆಗಳಲ್ಲಿ ಶೇ.90ರಷ್ಟು ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಲಾಗಿದ್ದು ಬಹುಪಾಲು ಪ್ರತಿಯೊಂದು ಮನೆಗೂ ನಳ್ಳಿನೀರನ್ನು ಪೂರೈಸಲಾಗುತ್ತದೆ. ನಗರದ ಘನತ್ಯಾಜ್ಯ ಸಂಗ್ರಹಕ್ಕಾಗಿ ನಗರಾಡಳಿತವು ಪ್ರತಿಯೊಂದು ಮನೆಯಿಂದಲೂ ತ್ಯಾಜ್ಯವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಶೇ.100ರಷ್ಟು ಯಶಸ್ಸು ಸಾಧಿಸಿದೆ. ಪ್ರತಿದಿನ 400 ತಳ್ಳುಗಾಡಿಗಳು 402 ಟನ್‌ಗಳಷ್ಟು ತ್ಯಾಜ್ಯ ಕಸವನ್ನು 165 ಆಟೊ ಟಿಪ್ಪರ್‌ಗಳಿಗೆ ಸಾಗಿಸುತ್ತವೆ.
ದಕ್ಷತೆಯಿಂದ ಕೂಡಿದ ಪ್ರತ್ಯೇಕಿಸುವಿಕೆ
ಎಮ್‌ಸಿಸಿಯ ಪರಿಸರ ಇಂಜಿನಿ ಯರ್ ಎಂ.ಮಧುಕರ್ ಹೇಳುತ್ತಾರೆ; ಘನತ್ಯಾಜ್ಯವನ್ನು, ಅದನ್ನು ಸಂಗ್ರಹಿಸುವಾಗಲೇ ಒಣ ಹಾಗೂ ಒದ್ದೆ (ವೆಟ್) ತ್ಯಾಜ್ಯವೆಂದು ಪ್ರತ್ಯೇಕಿಸಿಯೇ ಸಂಗ್ರ ಹಿಸಲಾಗುತ್ತದೆ. ಶೇ.60ರಷ್ಟು ಪ್ರತ್ಯೇಕಿಸುವಿಕೆ ಈ ಹಂತ ದಲ್ಲೇ ಆಗಿಬಿಡುತ್ತದೆ. ಆದರೆ ಶೂನ್ಯತ್ಯಾಜ್ಯ ಆಡಳಿತ ಪ್ಲಾಂಟ್‌ಗಳಲ್ಲಿ ತ್ಯಾಜ್ಯವನ್ನು 24 ವರ್ಗಗಳಾಗಿ ಎರಡನೆ ಯ ಬಾರಿಗೆ ಪ್ರತ್ಯೇಕಿಸಲಾಗುತ್ತದೆ. ಈ 47 ಪ್ಲಾಂಟ್‌ಗಳನ್ನು 47 ಎನ್‌ಜಿಒಗಳು ನಡೆಸುತ್ತಿದೆ. ಇವುಗಳು 47 ತ್ಯಾಜ್ಯ ಸಂಗ್ರಹಣಾ ಕೇಂದ್ರಗಳನ್ನು ತೆರೆದಿವೆ. ಅಲ್ಲದೆ ತ್ಯಾಜ್ಯಗಳು ಪುನರ್‌ಬಳಕೆಗೆ ದೊರಕುವಂತೆ ಮಾಡುವ ರಿಸೈಕಲ್ ಮಾಡುವವರಿಗೆ ತ್ಯಾಜ್ಯ ಗಳನ್ನು ಮಾರಿ ಇವುಗಳು ತಿಂಗಳೊಂದರ ರೂ. 20,000 ದಿಂದ 30,000ರಷ್ಟು ಸಂಪಾದಿಸುತ್ತವೆ.
ರೈತರಿಗೆ ಗೊಬ್ಬರ
ಒದ್ದೆ ತ್ಯಾಜ್ಯದ ಸುಮಾರು ಅರ್ಧದಷ್ಟು ತ್ಯಾಜ್ಯವು ವಿದ್ಯಾರಣ್ಯಪುರದಲ್ಲಿ 11 ಎಕರೆ ವಿಸ್ತಾರದಲ್ಲಿರುವ ಕೇಂದ್ರ ಗೊಬ್ಬರ (ಕಂಪೋಸ್ಟ್) ಪ್ಲಾಂಟ್‌ಗೆ ಹೋಗುತ್ತದೆ. ಅಲ್ಲಿ ಇದನ್ನು ಯಂತ್ರಗಳ ಮೂಲಕ ಪ್ರೊಸೆಸ್ ಮಾಡಲಾಗುತ್ತದೆ. ಆ ಬಳಿಕ ದೊರಕುವ ಗೊಬ್ಬರವನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ. ಗೊಬ್ಬರವನ್ನು ವಾಹನಗಳಿಗೆ ತುಂಬುವ (ಲೋಡ್ ಮಾಡುವ) ವೆಚ್ಚವನ್ನು ಮಾತ್ರ ಅವರು ನೀಡ ಬೇಕಾಗುತ್ತದೆ. ಅಂತಿಮವಾಗಿ, ಸಾಮಾನ್ಯವಾಗಿ ಒಂದು ದಿನದಲ್ಲಿ ಉಳಿಯುವ 90 ಟನ್‌ಗಳಷ್ಟು ತ್ಯಾಜ್ಯವು ಶೇ.7.25 ಎಕರೆ ವಿಸ್ತಾರವಿರುವ ಬೃಹತ್ ಹೊಂಡಕ್ಕೆ (ಲ್ಯಾಂಡ್‌ಫಿಲ್‌ಗೆ) ಹೋಗುತ್ತದೆ. ಈ ಲ್ಯಾಂಡ್‌ಫಿಲ್ ವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ.
ಬೃಹತ್ ಜನರೇಟರ್‌ಗಳು
ನಗರದ ಹಲವಾರು ಶಾಪಿಂಗ್ ಮಾಲ್‌ಗಳು, ಹೊಟೇಲ್ ಮತ್ತು ಉಪಾಹಾರಗೃಹಗಳು, ವಿವಾಹ ಸಭಾ ಭವನಗಳು ಮತ್ತು ಕನ್ವೆನ್ಶನ್ ಸೆಂಟರ್‌ಗಳು, ಶಿಕ್ಷಣ ಸಂಸ್ಥೆಗಳು ತಮ್ಮ ತಮ್ಮ ತ್ಯಾಜ್ಯ ವಿಲೇವಾರಿಗಾಗಿ ತಮ್ಮದೇ ಆದ ಜೈವಿಕ ಅನಿಲ ಸ್ಥಾವರಗಳನ್ನು ಸ್ಥಾಪಿಸಿಕೊಂಡಿವೆ. ಈ ಅನಿಲವನ್ನು ಅವು ತಮ್ಮದೇ ಆದ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತವೆ ನಗರದಲ್ಲಿ ದಿನವೊಂದರ ಸಂಗ್ರಹವಾಗುವ ಪಶುತ್ಯಾಜ್ಯ(ಎನಿಮಲ್ ವೇಸ್ಟ್) ಸುಮಾರು 12ರಿಂದ 15 ಟನ್‌ಗಳಷ್ಟಾಗುತ್ತದೆ. ನಗರದ ಹಳೆಯ ವಧಾಗೃಹದಿಂದ ಬರುವ ಈ ತ್ಯಾಜ್ಯವನ್ನು ಕೆಸರೆ ನಿವೇಶನದಲ್ಲಿರುವ ಸ್ಥಳಕ್ಕೆ ಸಾಗಿಸಿ ಆಳವಾದ ಹೊಂಡದಲ್ಲಿ ವಿಲೇವಾರಿ ಮಾಡಲಾಗ್ತುತದೆ. ಇದಕ್ಕಾಗಿ ಪ್ರತ್ಯೇಕವಾದ ಆಟೊ ಟಿಪ್ಪರ್‌ಗಳಿವೆ ನಗರದ ಸ್ವಚ್ಛತೆಯ ಕೀರ್ತಿ ಎನ್‌ಜಿಒಗಳಿಗೆ ಹಾಗೂ ನಗರದ ಸಾರ್ವಜನಿಕರಿಗೆ ಸಲ್ಲಬೇಕು, ಎನ್ನುತ್ತಾರೆ ನಗರಪಾಲಿಕೆಯ ಆರೋಗ್ಯಾಧಿಕಾರಿ ಡಿ. ಜಿ. ನಾಗರಾಜು.
ನಗರದ ನೈರ್ಮಲ್ಯಕ್ಕಾಗಿ ದಿನವೊಂದರ 157 ಮಿಲಿಯ ಲೀಟರ್ ತ್ಯಾಜ್ಯವನ್ನು ಸಂಸ್ಕರಣಗೊಳಿಸುವ ಮೂರು ಸ್ಥಾವರಗಳಿವೆ. ನಗರದಲ್ಲಿ ನಿರ್ಮಾಣವಾಗುವ ಹೊಸ ಕಟ್ಟಡಗಳು ಮಳೆ ನೀರು ಕೊಯಿಲು ವ್ಯವಸ್ಥೆಯನ್ನು ಹೊಂದಿರಲೇಬೇಕು ಎಂಬ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ. ಈ ವ್ಯವಸ್ಥೆ ಇಲ್ಲದ ಕಟ್ಟಡಗಳಿಗೆ ‘ಕಂಪ್ಲೀಶನ್ ಸರ್ಟಿಫಿಕೇಟ್’ ನೀಡಲಾಗುವುದಿಲ್ಲ. 7,000 ಹೊಸ ಕಟ್ಟಡಗಳು ಈಗಾಗಲೇ ಈ ನಿಯಮವನ್ನು ಪಾಲಿಸಿವೆ.
ಬಯಲು ಶೌಚ ಮುಕ್ತ ಸ್ಥಾನಮಾನ
ನಗರ ಪಾಲಿಕೆಯು ಪ್ರಧಾನಮಂತ್ರಿಗಳ ಸ್ವಚ್ಛತಾ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿದೆ. ನಗರದ ಬಯಲು ಶೌಚ ಮುಕ್ತ ಸ್ಥಾನಮಾನಕ್ಕಾಗಿ ಅದು 425 ನಿವಾಸಿಗಳಿಗೆ ಅವರ ನಿವೇಶನ ಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ನೆರವು ನೀಡಿದೆ.
ಪಾರದರ್ಶಕತೆ
ದಕ್ಷತೆ ಮತ್ತು ಪಾರದರ್ಶಕತೆಯು ಮೈಸೂರಿನಲ್ಲಿ ‘ಸ್ವಚ್ಛ ಭಾರತ್’ ಕನಸು ನನಸಾಗುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಮೈಸೂರು ನಗರವು ಇತರ ನಗರಗಳಿಗೆ ಒಂದು ಮಾದರಿಯಾಗಿದೆ.

Writer - ಎಮ್.ಎ. ಸಿರಾಜ್

contributor

Editor - ಎಮ್.ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ