ಅತ್ಯಾಚಾರ ಆರೋಪ: ಬಿಷಪ್ ಫ್ರಾಂಕೋ ಮುಲಕ್ಕಲ್ ಗೆ ಜಾಮೀನು

Update: 2018-10-15 16:19 GMT

ತಿರುವನಂತಪುರ, ಅ. 15: ಕ್ರೈಸ್ತ ಸನ್ಯಾಸಿನಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜಲಂಧರ್‌ನ ಮಾಜಿ ಬಿಷಪ್ ಫ್ರಾಂಕೋ ಮುಳಕ್ಕಲ್‌ಗೆ ಕೇರಳ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಹಲವು ಸುತ್ತು ವಿಚಾರಣೆ ನಡೆಸಿದ ಬಳಿಕ ಕೇರಳ ಪೊಲೀಸರು ಅವರನ್ನು ಸೆಪ್ಟಂಬರ್ 21ರಂದು ಬಂಧಿಸಿದ್ದರು. ಜಾಮೀನು ನೀಡಿದ ಬಳಿಕ ನ್ಯಾಯಮೂರ್ತಿ ರಾಜಾ ವಿಜಯರಾಘವನ್ ಪಾಸ್‌ಪೋರ್ಟ್ ತಮ್ಮ ವಶಕ್ಕೆ ಒಪ್ಪಿಸುವಂತೆ ಹಾಗೂ ಎರಡು ವಾರಗಳಲ್ಲಿ ಒಮ್ಮೆ ಶನಿವಾರ ತನಿಖಾಧಿಕಾರಿ ಮುಂದೆ ಹಾಜರಾಗುವುದು ಹೊರತುಪಡಿಸಿ ಕೇರಳ ರಾಜ್ಯ ಪ್ರವೇಶಿಸದಂತೆ ಬಿಷಪ್ ಅವರಿಗೆ ನಿರ್ದೇಶನ ನೀಡಿದ್ದಾರೆ.

ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಬಾರದು ಎಂದು ಕೂಡ ನ್ಯಾಯಾಲಯ ಬಿಷಪ್ ಅವರಿಗೆ ಸೂಚನೆ ನೀಡಿದೆ.

2014 ಹಾಗೂ 2016ರ ನಡುವೆ ಮುಳಕ್ಕಲ್ ತನ್ನ ಮೇಲೆ 13 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು 43 ವರ್ಷದ ಕ್ರೈಸ್ತ ಸನ್ಯಾಸಿನಿ ಪೊಲೀಸ್ ದೂರು ನೀಡಿದ್ದರು. ಈ ಕ್ರೈಸ್ತ ಸನ್ಯಾಸಿನಿ ಪಂಜಾಬ್ ಮೂಲದ ಮಿಷನರಿ ಆಫ್ ಜೀಸಸ್ ಕಾಂಗ್ರಗೇಶನ್‌ನ ಸದಸ್ಯೆ. ಈ ಸಂಸ್ಥೆ ಕೇರಳದಲ್ಲಿ ಮೂರು ಕಾನ್ವೆಂಟ್‌ಗಳನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News