ನೇಪಾಳ: ಕಿರೀಟ, ರಾಜದಂಡ, ಖಡ್ಗ ಸಾರ್ವಜನಿಕರ ವೀಕ್ಷಣೆಗೆ

Update: 2018-10-15 16:56 GMT

ಕಠ್ಮಂಡು, ಅ. 15: ನೇಪಾಳ ಸರಕಾರವು ಸೋಮವಾರ ಶಾ ರಾಜಮನೆತನಕ್ಕೆ ಸೇರಿದ ಕಿರೀಟ ಮತ್ತು ಇತರ 11 ಕಲಾಕೃತಿಗಳನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿದೆ.

ನೇಪಾಳವು ಪ್ರಜಾಪ್ರಭುತ್ವಕ್ಕೆ ಪರಿವರ್ತನೆಗೊಂಡ ಒಂದು ದಶಕದ ಬಳಿಕ, ಎರಡೂವರೆ ಶತಮಾನಗಳ ಕಾಲ ದೇಶವನ್ನು ಆಳಿದ ರಾಜ ಮನೆತನದ ಪಳೆಯುಳಿಕೆಗಳನ್ನು ಸಾರ್ವಜನಿಕರ ವೀಕ್ಷಣೆಗೆ ಇಟ್ಟಿದೆ.

ಈಗ ವಸ್ತುಸಂಗ್ರಹಾಲಯವಾಗಿ ಪರಿವರ್ತನೆಗೊಂಡಿರುವ ನಾರಾಯಣಹಿಟಿ ಅರಮನೆಯಲ್ಲಿ ನಡೆದ ವಿಶೇಷ ಸಮಾರಂಭವೊಂದರಲ್ಲಿ ಪ್ರಧಾನಿ ಕೆ.ಪಿ. ಶರ್ಮ ಒಲಿ ಕಿರೀಟವನ್ನು ಅನಾವರಣಗೊಳಿಸಿದರು.

ಕಿರೀಟವು ಮುಂದಿನ ದಿನಗಳಲ್ಲಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ ಹಾಗೂ ಇದು ನೇಪಾಳದ ಪ್ರವಾಸೋದ್ದಿಮೆಯನ್ನು ಉತ್ತೇಜಿಸುತ್ತದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಅವರು ಹೇಳಿದರು.

ಶಾ ರಾಜಮನೆತನದ ಕೊನೆಯ ದೊರೆ ಜ್ಞಾನೇಂದ್ರ ಶಾ 2008 ಜೂನ್ 11ರಂದು ಅರಮನೆಯನ್ನು ತೊರೆದಿದ್ದರು. ಅರಮನೆಯನ್ನು ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾಗುವುದು ಎಂಬುದಾಗಿ ಅಂದಿನ ಪ್ರಧಾನಿ ಗಿರಿಜಪ್ರಸಾದ್ ಕೊಯಿರಾಲ ಹೇಳಿದ್ದರು.

ಕಿರೀಟ, ರಾಜದಂಡ ಮತ್ತು ಖಡ್ಗ ಸೇರಿದಂತೆ ಜ್ಞಾನೇಂದ್ರರಿಗೆ ಸೇರಿದ 12 ಬೆಲೆಬಾಳುವ ವಸ್ತುಗಳನ್ನು ಸೋಮವಾರ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News