93 ವರ್ಷದ ಅಜ್ಜಿ ‘ಮಿಸ್ ಹೋಲೊಕಾಸ್ಟ್ ಸರ್ವೈವರ್’

Update: 2018-10-15 16:57 GMT

ಹೈಫ (ಇಸ್ರೇಲ್), ಅ. 15: ರವಿವಾರ ನಡೆದ ಇಸ್ರೇಲ್‌ನ ವಾರ್ಷಿಕ ಸೌಂದರ್ಯ ಸ್ಪರ್ಧೆಯಲ್ಲಿ 93 ವರ್ಷದ ತೋವಾ ರಿಂಗರ್ ‘ಮಿಸ್ ಹೋಲೊಕಾಸ್ಟ್ ಸರ್ವೈವರ್’ (ನಾಝಿಗಳು ನಡೆಸಿದ ಜನಾಂಗೀಯ ಹತ್ಯಾಕಾಂಡದಲ್ಲಿ ಬದುಕುಳಿದವರಲ್ಲಿ ಸುಂದರಿ) ಕಿರೀಟವನ್ನು ಗಳಿಸಿದರು.

ನಾಝಿಗಳು ನಡೆಸಿದ ಜನಾಂಗೀಯ ಹತ್ಯಾಕಾಂಡದ ಬರ್ಬರತೆಯನ್ನು ಸಹಿಸಿದ ಮಹಿಳೆಯರಿಗಾಗಿ ಈ ವಾರ್ಷಿಕ ಸೌಂದರ್ಯ ಸ್ಪರ್ಧೆಯನ್ನು ನಡೆಸಲಾಗುತ್ತದೆ.

ಇಸ್ರೇಲ್‌ನ ಹೈಫ ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ 12 ಸ್ಪರ್ಧಿಗಳು ಭಾಗವಹಿಸಿದರು.

ಸ್ಪರ್ಧಿಗಳ ಹಲವು ತಲೆಮಾರುಗಳ ಸಂಬಂಧಿಕರು ಅವರನ್ನು ಉತ್ತೇಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News