ಚೀನಾ ವಿರುದ್ಧ ಅಮೆರಿಕ ಇನ್ನೊಂದು ಸುತ್ತಿನ ಆಮದು ಸುಂಕ: ಟ್ರಂಪ್ ಇಂಗಿತ

Update: 2018-10-15 17:03 GMT

ವಾಶಿಂಗ್ಟನ್, ಅ. 15: ಚೀನಾದ ಮೇಲೆ ಇನ್ನೊಂದು ಸುತ್ತಿನ ಆಮದು ಸುಂಕ ವಿಧಿಸುವ ಬೆದರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಕಿದ್ದಾರೆ. ಅಮೆರಿಕದ ರಾಜಕಾರಣದಲ್ಲಿ ಚೀನಾ ಹಸ್ತಕ್ಷೇಪ ನಡೆಸುವುದು, 2016ರ ಅಮೆರಿಕ ಚುನಾವಣೆಯಲ್ಲಿ ರಶ್ಯ ಶಾಮೀಲಾಗಿರುವುದಕ್ಕಿಂತಲೂ ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಚೀನಾದ ಆರ್ಥಿಕತೆಯನ್ನು ‘ಆರ್ಥಿಕ ಕುಸಿತ’ಕ್ಕೆ ಪರಿವರ್ತಿಸಲು ನೀವು ಬಯಸಿದ್ದೀರಾ ಎಂಬ ಪ್ರಶ್ನೆಗೆ, ‘ಇಲ್ಲ’ ಎಂಬುದಾಗಿ ಟ್ರಂಪ್ ಉತ್ತರಿಸಿದರು.

ಸಿಬಿಎಸ್ ಸುದ್ದಿ ಚಾನೆಲ್‌ನ ‘60 ನಿಮಿಷ’ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.

‘‘ನ್ಯಾಯೋಚಿತ ವ್ಯಾಪಾರದ ಬಗ್ಗೆ ಅವರು ನಮ್ಮೆಂದಿಗೆ ಮಾತುಕತೆ ನಡೆಸಬೇಕೆಂದು ನಾವು ಬಯಸುತ್ತೇವೆ. ನಮ್ಮ ಮಾರುಕಟ್ಟೆಗಳನ್ನು ನಾವು ಅವರಿಗೆ ತೆರೆಯುವಂತೆ, ಅವರ ಮಾರುಕಟ್ಟೆಗಳನ್ನು ಅವರು ನಮಗೆ ತೆರೆಯಬೇಕೆಂದು ನಾವು ಇಚ್ಛಿಸುತ್ತೇವೆ’’ ಎಂದು ಟ್ರಂಪ್ ಹೇಳಿದರು.

ಇನ್ನೂ ಹೆಚ್ಚಿನ ಆಮದು ಸುಂಕಗಳು ಬರುವ ಸಾಧ್ಯತೆಯ ಬಗ್ಗೆ ಅವರು ಸುಳಿವು ನೀಡಿದರು.

ಈವರೆಗೆ, ಅಮೆರಿಕವು ಚೀನಾ ವಿರುದ್ಧ ಮೂರು ಸುತ್ತುಗಳಲ್ಲಿ 250 ಬಿಲಿಯ ಡಾಲರ್ ಆಮದು ಸುಂಕ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News