ಹವಾಮಾನ ಬದಲಾವಣೆ ಸುಳ್ಳಲ್ಲ, ಆದರೆ ಅದು ಮೂಲ ಸ್ಥಿತಿಗೆ ಬರುತ್ತದೆ: ಟ್ರಂಪ್

Update: 2018-10-15 17:05 GMT

ವಾಶಿಂಗ್ಟನ್, ಅ. 15: ಹವಾಮಾನ ಬದಲಾವಣೆ ಎನ್ನುವುದು ಸುಳ್ಳು ಎನ್ನುವ ನಿಲುವಿನಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದಾರೆ. ಆದರೆ, ಅದು ಮಾನವ ನಿರ್ಮಿತವೇ ಎನ್ನುವುದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಹಾಗೂ, ಹವಾಮಾನವು ಮತ್ತೆ ಮೂಲ ಸ್ಥಿತಿಗೆ ಬದಲಾಗುತ್ತದೆ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

ಹವಾಮಾನ ಬದಲಾವಣೆಗೆ ಪ್ರತಿಕ್ರಿಯಿಸುತ್ತಾ ಅಮೆರಿಕವನ್ನು ದುರ್ಬಲಗೊಳಿಸಲು ನಾನು ಬಯಸುವುದಿಲ್ಲ ಎಂದು ಸಿಬಿಎಸ್ ಟಿವಿಯ ‘60 ಮಿನಿಟ್’ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

ಈ ಕಾರ್ಯಕ್ರಮವು ರವಿವಾರ ಪ್ರಸಾರಗೊಂಡಿದೆ.

‘‘ಏನೋ ನಡೆಯುತ್ತಿದೆ ಎಂದು ನನಗನಿಸುತ್ತದೆ. ಏನೋ ಬದಲಾಗುತ್ತಿದೆ ಹಾಗೂ ಅದು ಮತ್ತೆ ಬದಲಾಗುತ್ತದೆ’’ ಎಂದರು.

‘‘ಅದೊಂದು ಸುಳ್ಳು ಎಂದು ನನಗನಿಸುವುದಿಲ್ಲ. ಆದರೆ ಅಲ್ಲಿ ವ್ಯತ್ಯಾಸವಿದೆ ಎಂದು ನನಗನಿಸುತ್ತದೆ. ಆದರೆ, ಅದು ಮಾನವನಿರ್ಮಿತವೇ ಎಂದು ನನಗೆ ಗೊತ್ತಿಲ್ಲ. ನಾನು ಹೇಳುವುದು ಇಷ್ಟೆ: ನಾನು ಟ್ರಿಲಿಯನ್‌ಗಟ್ಟಳೆ ಡಾಲರ್ ಕೊಡುವುದಿಲ್ಲ. ಮಿಲಿಯಗಟ್ಟಳೆ ಉದ್ಯೋಗಗಳನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ’’ ಎಂದು ಟ್ರಂಪ್ ಹೇಳಿದರು.

2012 ನವೆಂಬರ್‌ನಲ್ಲಿ ಹವಾಮಾನ ಬದಲಾವಣೆಯನ್ನು ಟ್ರಂಪ್ ಸುಳ್ಳು ಎಂಬುದಾಗಿ ಕರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News