ಮುಂಬೆ ತಂಡದಲ್ಲಿ ಪೃಥ್ವಿ, ರಹಾನೆ ಲಭ್ಯ

Update: 2018-10-16 05:27 GMT

ಮುಂಬೈ, ಅ.15: ಮೂವರು ಅಗ್ರ ಆಟಗಾರರ ಲಭ್ಯತೆಯೊಂದಿಗೆ ವಿಜಯ್ ಹಝಾರೆ ಟ್ರೋಫಿ ಟೂರ್ನಮೆಂಟ್‌ನ ನಿರ್ಣಾಯಕ ಸೆಮಿ ಫೈನಲ್ ಪಂದ್ಯಕ್ಕಿಂತ ಮೊದಲು ಮುಂಬೈ ತಂಡ ಮತ್ತಷ್ಟು ಬಲಿಷ್ಠವಾಗಿದೆ.

ರೋಹಿತ್ ಶರ್ಮಾ, ಯುವ ಆಟಗಾರ ಪೃಥ್ವಿ ಶಾ ಹಾಗೂ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಮುಂಬೈ ತಂಡದ ಪರ ಸೆಮಿ ಫೈನಲ್ ಪಂದ್ಯವನ್ನು ಆಡಲಿದ್ದಾರೆ.

ರಾಷ್ಟ್ರೀಯ ಏಕದಿನ ಟೂರ್ನಮೆಂಟ್ ವಿಜಯ್ ಹಝಾರೆ ಟ್ರೋಫಿಯಲ್ಲಿ ರೋಹಿತ್ ಕ್ವಾರ್ಟರ್ ಫೈನಲ್ ಪಂದ್ಯ ಆಡಿದ್ದರು. ಇದೀಗ ಶಾ ಹಾಗೂ ರಹಾನೆ ಅವರೊಂದಿಗೆ ಆಡಲು ಸಜ್ಜಾಗಿದ್ದಾರೆ. ಶಾ ಹಾಗೂ ರಹಾನೆ ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಿದ್ದರು.

 ಎಲ್ಲ ಮೂವರು ಆಟಗಾರರು ಸೆಮಿ ಫೈನಲ್‌ನಲ್ಲಿ ಲಭ್ಯವಿರುತ್ತಾರೆ ಎಂದು ಮುಂಬೈನ ಮುಖ್ಯ ಆಯ್ಕೆಗಾರ ಹಾಗೂ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಖಚಿತಪಡಿಸಿದ್ದಾರೆ. ಏಕಪಕ್ಷೀಯವಾಗಿ ಸಾಗಿದ ಕ್ವಾರ್ಟರ್ ಫೈನಲ್‌ನಲ್ಲಿ ಬಿಹಾರ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದ ಮುಂಬೈ ಸೆಮಿ ಫೈನಲ್‌ಗೆ ತಲುಪಿತ್ತು. ಶಾ ವಿಂಡೀಸ್ ವಿರುದ್ದ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುವುದಕ್ಕಿಂತ ಮೊದಲು ಈ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆಡಿದ್ದರು.

ವಿಜಯ್ ಹಝಾರೆ ಟ್ರೋಫಿಯ ಸೆಮಿ ಫೈನಲ್ ಪಂದ್ಯಗಳು ಅ.17 ಹಾಗೂ 18 ರಂದು ನಡೆಯಲಿದೆ. ಅ.17 ರಂದು ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ಮುಂಬೈ ತಂಡ ಹೈದರಾಬಾದ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News