ಏಶ್ಯ ಮೂಲದ ವಿದ್ಯಾರ್ಥಿಗಳ ವಿರುದ್ಧ ಹಾರ್ವರ್ಡ್ ವಿವಿ ತಾರತಮ್ಯ: ವಿದ್ಯಾರ್ಥಿ ಸಂಘಟನೆ ಆರೋಪ

Update: 2018-10-16 18:03 GMT

ಬೋಸ್ಟನ್, ಅ. 16: ಏಶ್ಯ-ಅಮೆರಿಕನ್ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸುವುದಕ್ಕಾಗಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯವು ಆಯ್ಕೆ ಪ್ರಕ್ರಿಯೆಯಲ್ಲಿ ಅವರ ವಿರುದ್ಧ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ ಎಂದು ‘ಸ್ಟೂಡೆಂಟ್ಸ್ ಫಾರ್ ಫೇರ್ ಅಡ್ಮಿಶನ್ಸ್’ ಎಂಬ ಗುಂಪು ಆರೋಪಿಸಿದೆ.

ಈ ಸಂಬಂಧ ಈ ಗುಂಪು ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಐವಿ ಲೀಗ್ ಸ್ಕೂಲ್ ವಿರುದ್ಧ ಬೋಸ್ಟನ್‌ನ ಫೆಡರಲ್ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ಹೂಡಿದೆ.

ಐವಿ ಲೀಗ್ ಸ್ಕೂಲನ್ನು ಮೀಸಲಾತಿ ವಿರೋಧಿ ಕಾರ್ಯಕರ್ತರೊಬ್ಬರು ಸ್ಥಾಪಿಸಿದ್ದಾರೆ ಹಾಗೂ ಶಾಲೆಯ ಆಡಳಿತವನ್ನು ಟ್ರಂಪ್ ಸರಕಾರ ಬೆಂಬಿಲಿಸುತ್ತಿದೆ.

‘‘ಶೈಕ್ಷಣಿಕ ಮಾನದಂಡಗಳಲ್ಲಿ ಏಶ್ಯ ಅಮೆರಿಕನ್ನರು ಇತರ ಗುಂಪುಗಳನ್ನು ಹಿಂದಿಕ್ಕಿದ್ದಾರೆ, ಆದರೆ ಅಭ್ಯರ್ಥಿಯ ಸ್ವೀಕಾರಾರ್ಹತೆ ಮತ್ತು ಸಾಮರ್ಥ್ಯ ಮುಂತಾದ ವೈಯಕ್ತಿಕ ವಿಷಯಗಳಲ್ಲಿ ಅವರು ಕಡಿಮೆ ಅಂಕಗಳನ್ನು ಪಡೆದಿದ್ದಾರೆ’’ ಎಂದು ಸೋಮವಾರ ನ್ಯಾಯಾಲಯದಲ್ಲಿ ವಾದಿಸಿದ ‘ಸ್ಟೂಡೆಂಟ್ಸ್ ಫಾರ್ ಫೇರ್ ಅಡ್ಮಿಶನ್’ ಗುಂಪಿನ ವಕೀಲ ಆ್ಯಡಂ ಮೋರ್ಟಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News