ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಷಪ್ ಗೆ ಹೂಹಾರ ಹಾಕಿ ಸ್ವಾಗತ

Update: 2018-10-17 16:50 GMT

ಚಂಢೀಗಡ, ಅ.17: ಅತ್ಯಾಚಾರ ಆರೋಪ ಎದುರಿಸುತ್ತಿರುವ ರೋಮನ್ ಕ್ಯಾಥಲಿಕ್ ಬಿಷಪ್ ಫ್ರಾಂಕೋ ಮುಲಕ್ಕಲ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದು, ಜಲಂಧರ್ ತಲುಪಿದ ಅವರನ್ನು ಹೂಹಾರ ಹಾಕಿ ಸ್ವಾಗತಿಸಲಾಯಿತು.

ಮುಲಕ್ಕಲ್ ಜಲಂಧರ್ ತಲುಪುತ್ತಲೇ ಅನುಯಾಯಿಗಳು ಹೂಮಳೆಗರೆದರು. ಪಂಜಾಬ್ ಪೊಲೀಸರು ಬಿಷಪ್ ಗೆ ಭದ್ರತೆಯನ್ನು ಒದಗಿಸಿದ್ದರು. ಬಿಷಪ್ ಫ್ರಾಂಕೋ ಮುಲಕ್ಕಲ್ ರಿಗೆ ಕೇರಳ ಹೈಕೋರ್ಟ್ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಕೊಟ್ಟಾಯಂ ಸಮೀಪದ ಜೈಲಿನಿಂದ ಬಿಡುಗಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News