ಪಾಕ್ ನಾಯಕ ಸರ್ಫರಾಝ್ ಆಸ್ಪತ್ರೆಗೆ ದಾಖಲು

Update: 2018-10-19 07:56 GMT

ಅಬುಧಾಬಿ, ಅ.19: ಪಾಕಿಸ್ತಾನ ನಾಯಕ ಸರ್ಫರಾಝ್ ಅಹ್ಮದ್ ಆಸ್ಪತ್ರೆಗೆ ದಾಖಲಾಗಿದ್ದು ಆಸ್ಟ್ರೇಲಿಯ ವಿರುದ್ಧ ಎರಡನೇ ಟೆಸ್ಟ್‌ನ ನಾಲ್ಕನೇ ದಿನವಾದ ಶುಕ್ರವಾರ ಮೈದಾನಕ್ಕೆ ಇಳಿಯಲಿಲ್ಲ.

ಸರ್ಫರಾಝ್ ಗುರುವಾರ ಪಾಕಿಸ್ತಾನದ ಎರಡನೇ ಇನಿಂಗ್ಸ್‌ನಲ್ಲಿ 33 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಆಸ್ಟ್ರೇಲಿಯ ವೇಗದ ಬೌಲರ್ ಪೀಟರ್ ಸಿಡ್ಲ್ ಎಸೆದ ಬೌನ್ಸರ್ ಎಸೆತವೊಂದು ಹೆಲ್ಮೆಟ್‌ಗೆ ಅಪ್ಪಳಿಸಿತ್ತು.

ಇದರಿಂದ ಬೇಗನೆ ಚೇತರಿಸಿಕೊಂಡ ಸರ್ಫರಾಝ್ ಬ್ಯಾಟಿಂಗನ್ನು ಮುಂದುವರಿಸಿ 123 ಎಸೆತಗಳಲ್ಲಿ 81 ರನ್ ಗಳಿಸಿದ್ದರು. ಪಾಕಿಸ್ತಾನ ತಂಡ ಆಸ್ಟ್ರೇಲಿಯ ತಂಡಕ್ಕೆ ಎರಡನೇ ಟೆಸ್ಟ್ ಪಂದ್ಯದ ಗೆಲುವಿಗೆ 538 ರನ್ ಸವಾಲು ನೀಡಲು ನೆರವಾಗಿದ್ದರು.

 ಸರ್ಫರಾಝ್ ಅನುಪಸ್ಥಿತಿಯಲ್ಲಿ ಇಂದು ಅಸದ್ ಶಫೀಕ್ ಪಾಕಿಸ್ತಾನ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದು, ಮುಹಮ್ಮದ್ ರಿಝ್ವಿನ್ ವಿಕೆಟ್‌ಕೀಪಿಂಗ್ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News