ನಟಸಾರ್ವಭೌಮ ಪುನೀತ್

Update: 2018-10-21 08:51 GMT

ಪವರ್‌ಸ್ಟಾರ್ ಪುನೀತ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಮೊದಲ ಪ್ರತಿಯನ್ನು, ನವೆಂಬರ್ 20ಕ್ಕೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ಗೆ ಸಲ್ಲಿಸಲು ನಿರ್ದೇಶಕ ಪವನ್ ಒಡೆಯರ್, ತನಗೆ ತಾನೇ ಗಡುವು ಹಾಕಿಕೊಂಡಿದ್ದಾರೆ. ಚಿತ್ರದ ಕ್ಲೈಮಾಕ್ಸ್ ದೃಶ್ಯದ ಶೂಟಿಂಗ್ ಕಳೆದ ವಾರ ಮೇಲುಕೋಟೆಯಲ್ಲಿ ಪೂರ್ತಿಯಾಗಿದ್ದು, ಇನ್ನೇನು ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಹಾಡು ಗಳನ್ನು ವಿದೇಶದಲ್ಲಿ ಚಿತ್ರೀಕರಿಸಲು ಪವನ್ ಒಡೆಯರ್ ಯೋಚಿಸುತ್ತಿದ್ದಾರೆ. ಅನುಪಮಾ ಪರಮೇಶ್ವರನ್ ಹಾಗೂ ರಚಿತಾರಾಮ್ ಚಿತ್ರದ ನಾಯಕಿಯರು. ಚಿಕ್ಕಣ್ಣ ಹಾಗೂ ರವಿಶಂಕರ್ ಕೂಡಾ ಚಿತ್ರದಲ್ಲಿದ್ದಾರೆ. ಡಿ. ಇಮಾನ್, ನಟ ಸಾರ್ವಭೌಮನಿಗೆ ಸಂಗೀತ ನೀಡಿದ್ದಾರೆ.

ನಟ ಸಾರ್ವಭೌಮ ಪಕ್ಕಾ ಆ್ಯಕ್ಷನ್ ಭರಿತ ಚಿತ್ರವಾಗಿದ್ದು, ಅದ್ಭುತ ಸಾಹಸದೃಶ್ಯಗಳು ಸ್ಯಾಂಡಲ್‌ವುಡ್ ಚಿತ್ರಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಲಿವೆ. ಬಾಹುಬಲಿ ಸರಣಿ, ಪುಲಿಮುರುಗನ್ ಮತ್ತಿತರ ಚಿತ್ರಗಳಲ್ಲಿ ರೋಮಾಂಚಕಕಾರಿ ಸಾಹಸದೃಶ್ಯಗಳನ್ನು ಸಂಯೋಜಿಸಿದ್ದ ಪೀಟರ್‌ಹೈನ್‌ರ ರೋಮಾಂಚಕ ಸ್ಟಂಟ್‌ಗಳು ನಟ ಸಾರ್ವಭೌಮದ ಹೈಲೈಟ್ ಆಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News