×
Ad

ಶಿವಪಾಲ ಯಾದವರಿಂದ ಹೊಸ ಪಕ್ಷದ ಘೋಷಣೆ

Update: 2018-10-23 23:14 IST

ಲಕ್ನೋ,ಅ.23: ವಾರಗಳ ಹಿಂದೆ ಸಮಾಜವಾದಿ ಜಾತ್ಯತೀತ ಮೋರ್ಚಾ (ಎಸ್‌ಎಸ್‌ಎಂ)ವನ್ನು ಸ್ಥಾಪಿಸಿದ್ದ ಶಿವಪಾಲ್ ಯಾದವ್ ಅವರು,ತನ್ನ ‘ಪ್ರಗತಿಶೀಲ ಸಮಾಜವಾದಿ ಪಾರ್ಟಿ ಲೋಹಿಯಾ’ನೂತನ ರಾಜಕೀಯ ಪಕ್ಷವನ್ನು ಮಂಗಳವಾರ ಘೋಷಿಸಿದರು.

ನೂತನ ಪಕ್ಷವು ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಲಿದೆ ಎಂದು ಯಾದವ್ ಮತ್ತು ಮಾಜಿ ಸಚಿವ ಶಾರದಾ ಪ್ರತಾಪ್ ಶುಕ್ಲಾ ಅವರು ಹೇಳಿದರು.

ಸಮಾಜವಾದಿ ಪಾರ್ಟಿಯಲ್ಲಿ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿಕೊಂಡು ಹಿರಿಯ ಸೋದರ ಮುಲಾಯಂ ಸಿಂಗ್ ಯಾದವ ಅವರ ಪುತ್ರ ಹಾಗೂ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಂದ ದೂರವಾದ ಬಳಿಕ ಯಾದವ ಆ.29ರಂದು ಎಸ್‌ಎಸ್‌ಎಂ ಸ್ಥಾಪಿಸಿದ್ದರು. ಆದರೆ ಅವರು ಈಗಲೂ ಎಸ್‌ಪಿ ಶಾಸಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News