×
Ad

ಎರಡು ಕುಟುಂಬಗಳ ನಡುವೆ ಘರ್ಷಣೆ: 6 ಮಂದಿ ಸಾವು, ನಾಲ್ವರಿಗೆ ಗಾಯ

Update: 2018-10-24 22:38 IST

ರಾಜ್‌ಕೋಟ್, ಅ. 24: ಎರಡು ವರ್ಷಗಳ ಹಿಂದೆ ನಡೆದ ಸ್ಥಳೀಯಾಡಳಿತ ಚುನಾವಣೆಯ ವಿವಾದಕ್ಕೆ ಸಂಬಂಧಿಸಿ ಕಚ್ಛ್‌ನ ಮುಂಡ್ರಾ ತಾಲೂಕಿನ ಛಾಸ್ರಾ ಗ್ರಾಮದಲ್ಲಿ ನಡೆದ ಎರಡು ಕುಟುಂಬಗಳ ನಡುವಿನ ಘರ್ಷಣೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಛಾಸ್ರಾ ಗ್ರಾಮ ಪಂಚಾಯತ್ ಚುನಾವಣೆ ಬಳಿಕ ಹಳೆಯ ವಿವಾದಕ್ಕೆ ಸಂಬಂಧಿಸಿ ಕಳೆದ ರವಿವಾರ ರಾತ್ರಿ ಎರಡು ಕುಟುಂಬಗಳ ಸದಸ್ಯರು ಮುಖಮುಖಿಯಾಗಿದ್ದರು. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಒಂದು ಗುಂಪಿನ ನಾಲ್ವರು ಹಾಗೂ ಇನ್ನೊಂದು ಗುಂಪಿನ ಇಬ್ಬರು ಮೃತಪಟ್ಟರು ಎಂದು ಕಚ್ಛ್ ಪೊಲೀಸ್ ಅಧೀಕ್ಷಕ ಎಂ.ಎಸ್. ಭರದಾ ತಿಳಿಸಿದ್ದಾರೆ.

ಛಾಸ್ರಾ ಗ್ರಾಮದ ಸರಪಂಚ ಸಾಕಿನಾ ಬೋಲಿಯಾ ಅವರ ನಿವಾಸದ ಹೊರಗಡೆ ಬುಧವಾರ ರಾತ್ರಿ 10.30ಕ್ಕೆ ಘರ್ಷಣೆ ಆರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

 ಮೃತಪಟ್ಟವರನ್ನು ಭಾರತ್ ಚಾವ್ಡಾ, ಅವರ ಸಹೋದರ ಮಂಗಲ್, ಸೋದರ ಸಂಬಂಧಿ ಚೇತನ್ ಹಾಗೂ ಭಾರ್ಗವ್ ಎಂದು ಗುರುತಿಸಲಾಗಿದೆ. ಇನ್ನೊಂದು ಗುಂಪಿನಲ್ಲಿ ಮೃತಪಟ್ಟವರಪನ್ನು ಸರಪಂಚ್ ಸಕೀನಾ ಅವರ ಪುತ್ರ ಅಬೀದ್ (24) ಹಾಗೂ ಅವರ ಮಾವ ಆದಂ (86) ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News