ಇನ್ನು ಮುಂದೆ ಈ ರಾಜ್ಯದಲ್ಲಿ ಪೆಟ್ರೋಲ್ ಖರೀದಿ, ದಾಸ್ತಾನು, ಮಾರಾಟಕ್ಕೆ ಅನುಮತಿಯ ಅಗತ್ಯವಿಲ್ಲ

Update: 2018-10-24 17:15 GMT

ಗುಜರಾತ್, ಅ.24: ಪೆಟ್ರೋಲ್, ಡೀಸೆಲ್ ಖರೀದಿ, ದಾಸ್ತಾನು ಮತ್ತು ಮಾರಾಟಕ್ಕೆ ಅನುಮತಿ ಪಡೆಯಬೇಕೆಂದಿದ್ದ ನಿಯಮವನ್ನು ಗುಜರಾತ್ ಸರಕಾರ ರದ್ದುಗೊಳಿಸಿದೆ.

‘ಕನಿಷ್ಠ ಸರಕಾರ, ಗರಿಷ್ಠ ಆಡಳಿತ’ ಎಂಬ ತತ್ವದ ಆಧಾರದಲ್ಲಿ ಈ ನಿರ್ಧಾರವನ್ನು ಜಾರಿಗೆ ತರಲಾಗಿದೆ ಎಂದು ಸರಕಾರದ ಪ್ರಕಟನೆ ತಿಳಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ನ ಖರೀದಿ, ದಾಸ್ತಾನು ಮತ್ತು ಮಾರಾಟಕ್ಕೆ ಪಡೆಯಬೇಕಿದ್ದ ಅನುಮತಿಯನ್ನು ಮುಖ್ಯಮಂತ್ರಿ ವಿಜಯ್ ರೂಪಾನಿ ರದ್ದುಗೊಳಿಸಿದ್ದಾರೆ” ಎನ್ನುವುದು ಪ್ರಕಟನೆಯಲ್ಲಿದೆ.

ಆದರೆ, ಪೆಟ್ರೋಲ್ ಪಂಪ್ ಸ್ಥಾಪಿಸಲು ಉದ್ದೇಶಿಸುವವರು ಈಗ ಇರುವ ನಿಯಮದಂತೆ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News