ಪಾಕ್ ವಿರುದ್ಧ ಭಾರತ ಮಹಿಳಾ ಫುಟ್ಬಾಲ್ ತಂಡಕ್ಕೆ ಭರ್ಜರಿ ಜಯ

Update: 2018-10-24 18:16 GMT

ಚೊನ್‌ಬರಿ(ಥಾಯ್ಲೆಂಡ್), ಅ.24: ಸ್ಟ್ರೈಕರ್ ರೇನು ಗಳಿಸಿದ ಐದು ಗೋಲುಗಳ ನೆರವಿನಿಂದ ಎಎಫ್‌ಸಿ ಅಂಡರ್-19 ಮಹಿಳಾ ಫುಟ್ಬಾಲ್ ಅರ್ಹತಾ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ಪಾಕಿಸ್ತಾನವನ್ನು 18-0 ಅಂತರದಿಂದ ಮಣಿಸಿತು. ಬುಧವಾರ ಇಲ್ಲಿ ನಡೆದ ಪಂದ್ಯದ ದ್ವಿತೀಯಾರ್ಧದಲ್ಲಿ ಬದಲಿ ಆಟಗಾರ್ತಿ ರೇನು ಐದು ಗೋಲುಗಳನ್ನು(52ನೇ, 54ನೇ, 75ನೇ, 89ನೇ, 90ನೇ ನಿಮಿಷ)ಬಾರಿಸಿದರು. ಎರಡನೇ ನಿಮಿಷದಲ್ಲಿ ಮನೀಶಾ ಭಾರತದ ಗೋಲು ಸುರಿಮಳೆಗೆ ಚಾಲನೆ ನೀಡಿದರು. 25ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಆ ನಂತರ ಡೆವ್‌ನೆಟಾ(9ನೇ, 25ನೇ ನಿಮಿಷ) ಹಾಗೂ ದಯಾ ದೇವಿ(27ನೇ ನಿ.)ಗೋಲು ಬಾರಿಸಿದರು. ಇದೇ ವೇಳೆ ಪಾಕ್‌ನ ಗೋಲ್‌ಕೀಪರ್ ಇಮಾನ್ ಫಯಾಝ್ 30ನೇ ನಿಮಿಷದಲ್ಲಿ ಸ್ವಯಂ ಗೋಲು ಬಾರಿಸಿದರು. ಮೊದಲಾರ್ಧದಲ್ಲಿ ಪಾಪ್ಕಿ ದೇವಿ ಹಾಗೂ ನಾಯಕಿ ಜಬಾಮನಿ ದೇವಿ ತಲಾ ಒಂದು ಗೋಲು ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News