×
Ad

ಇಥಿಯೋಪಿಯಕ್ಕೆ ಪ್ರಥಮ ಮಹಿಳಾ ಅಧ್ಯಕ್ಷರ ಆಯ್ಕೆ

Update: 2018-10-25 21:54 IST

ಅಡಿಸ್ ಅಬಾಬ (ಇಥಿಯೋಪಿಯ), ಅ. 25: ಇಥಿಯೋಪಿಯದ ನೂತನ ಅಧ್ಯಕ್ಷರನ್ನಾಗಿ ಹಿರಿಯ ರಾಜತಾಂತ್ರಿಕೆ ಸಹ್ಲೆ ವರ್ಕ್ ಝೆವ್ದೆ ಅವರ ನೇಮಕವನ್ನು ದೇಶದ ಸಂಸತ್ತು ಅಂಗೀಕರಿಸಿದೆ. ಅವರು ದೇಶದ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ.

 ಸಹ್ಲೆ ಪ್ರಸಕ್ತ ವಿಶ್ವಸಂಸ್ಥೆಯಲ್ಲಿ ಅಧೀನ ಮಹಾ ಕಾರ್ಯದರ್ಶಿ ಹಾಗೂ ಆಫ್ರಿಕ ಒಕ್ಕೂಟಕ್ಕೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯ ವಿಶೇಷ ಪ್ರತಿನಿಧಿಯಾಗಿದ್ದಾರೆ.

ಬುಧವಾರ ರಾಜೀನಾಮೆ ನೀಡಿದ ಅಧ್ಯಕ್ಷ ಮುಲಾತು ತೆಶೊಮಿ ವಿರ್ತು ಅವರ ಸ್ಥಾನವನ್ನು ಸಹ್ಲೆ ವಹಿಸಿಕೊಳ್ಳಲಿದ್ದಾರೆ.

ಇಥಿಯೋಪಿಯದಲ್ಲಿ ಅಧ್ಯಕ್ಷರ ಹುದ್ದೆ ಅಲಂಕಾರಿಕ. ಸರಕಾರದ ಮುಖ್ಯಸ್ಥರಾಗಿರುವ ಪ್ರಧಾನಿ ನಿಜವಾದ ಅಧಿಕಾರವನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News