2019ರ ಮಹಿಳಾ ವಿಶ್ವಕಪ್: ಪ್ರಶಸ್ತಿ ಮೊತ್ತ ಹೆಚ್ಚಳಕ್ಕೆ ಫಿಫಾ ಅಸ್ತು

Update: 2018-10-26 18:32 GMT

ಕಿಗಾಲಿ(ರುವಾಂಡ), ಅ.26:ಮುಂದಿನ ವರ್ಷ ಫ್ರಾನ್ಸ್ ನಲ್ಲಿ ಆರಂಭವಾಗಲಿರುವ ಮಹಿಳಾ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಮೊತ್ತವನ್ನು 15 ಮಿಲಿಯನ್ ಡಾಲರ್‌ನಿಂದ 30 ಮಿಲಿಯನ್ ಡಾಲರ್‌ಗೆ ಹೆಚ್ಚಿ ಸಲು ಫಿಫಾ ನಿರ್ಧರಿಸಿದೆ ಎಂದು ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಶುಕ್ರವಾರ ತಿಳಿಸಿದ್ದಾರೆ.

ರುವಾಂಡದಲ್ಲಿ ಫಿಫಾ ಕೌನ್ಸಿಲ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇನ್‌ಫ್ಯಾಂಟಿನೊ,‘‘ಟೂರ್ನಮೆಂಟ್ ಪೂರ್ವ ತಯಾರಿಗೆ 20 ಮಿಲಿಯನ್ ಡಾಲರ್ ಲಭ್ಯವಿರಲಿದ್ದು, 24 ದೇಶಗಳು ಭಾಗವಹಿಸುವ ಟೂರ್ನಿಗೆ ಒಟ್ಟು 50 ಮಿಲಿಯನ್ ಡಾಲರ್ ನೀಡಿದಂತಾಗಿದೆ ಎಂದು ಹೇಳಿದರು.

2015ರಲ್ಲಿ ಕೆನಡಾದಲ್ಲಿ ನಡೆದಿದ್ದ ವಿಶ್ವಕಪ್‌ಗಿಂತ ಎರಡು ಪಟ್ಟು ಹೆಚ್ಚು ಮೊತ್ತವನ್ನು ಮುಂದಿನ ವರ್ಷದ ವಿಶ್ವಕಪ್‌ಗೆ ನೀಡಲಾಗುತ್ತಿದೆ.

‘‘ಇದೊಂದು ಮಹಿಳಾ ಫುಟ್ಬಾಲ್‌ಗೆ ಪ್ರಮುಖ ಸಂದೇಶವಾಗಿದ್ದು, ಇದು 2019ರ ವಿಶ್ವಕಪ್‌ನ್ನು ಮತ್ತಷ್ಟು ಉತ್ತೇಜಿಸಲಿದೆ’’ ಎಂದು ಫಿಫಾ ಅಧ್ಯಕ್ಷರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News