ಯುಎಇಯಲ್ಲಿ ಇಮ್ರಾನ್ ಸಹೋದರಿಯ ಬೇನಾಮಿ ಆಸ್ತಿ

Update: 2018-10-27 17:16 GMT

ಇಸ್ಲಾಮಾಬಾದ್, ಅ. 27: ಯುಎಇಯಲ್ಲಿ ಬೇನಾಮಿ (ಬೇರೆಯವರ ಹೆಸರಿನಲ್ಲಿ) ಆಸ್ತಿಗಳನ್ನು ಹೊಂದಿರುವ ಪಾಕಿಸ್ತಾನದ 44 ಪ್ರಮುಖ ರಾಜಕೀಯ ನಾಯಕರು ಮತ್ತು ಸರಕಾರಿ ಅಧಿಕಾರಿಗಳ ಪಟ್ಟಿಯೊಂದನ್ನು ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿ (ಎಫ್‌ಐಎ) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ಪಟ್ಟಿಯಲ್ಲಿ ಪ್ರಧಾನಿ ಇಮ್ರಾನ್ ಖಾನ್‌ರ ಸಹೋದರಿ ಅಲೀಮಾ ಖಾನುಮ್ ಅವರ ಹೆಸರಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.ಪಾಕಿಸ್ತಾನದಿಂದ ವಿದೇಶಗಳಿಗೆ ವರ್ಗಾವಣೆಯಾದ ಅಕ್ರಮ ಹಣದ ಬಗ್ಗೆ ತನಿಖೆ ನಡೆಸುತ್ತಿರುವ ಮುಖ್ಯ ನ್ಯಾಯಾಧೀಶ ಮಿಯಾಂ ಸಾಕಿಬ್ ನಿಸಾರ್ ನೇತೃತ್ವದ ಮೂವರು ಸದಸ್ಯರ ಸುಪ್ರೀಂ ಕೋರ್ಟ್ ಪೀಠಕ್ಕೆ ಸಲ್ಲಿಸಲಾದ ದಾಖಲೆಗಳಲ್ಲಿ ಈ ಪಟ್ಟಿಯೂ ಸೇರಿದೆ.ಆರ್ಥಿಕತೆ ಮತ್ತು ಇಂಧನ ವಿಷಯಗಳಲ್ಲಿ ಸರಕಾರದ ವಕ್ತಾರರಾಗಿರುವ ಫಾರೂಕ್ ಸಲೀಮ್‌ರ ತಾಯಿಯ ಹೆಸರೂ ಪಟ್ಟಿಯಲ್ಲಿದೆ.ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ ನಾಯಕ ಮುಮ್ತಾಝ್ ಅಹ್ಮದ್ ಮುಸ್ಲಿಮ್ ಯುಎಇಯಲ್ಲಿ 16 ಆಸ್ತಿಗಳನ್ನು ಹೊಂದಿದ್ದಾರೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News