×
Ad

ಪ್ರೊ ಕಬಡ್ಡಿ: ಮುಂಬಾಕ್ಕೆ ಒಂದು ಅಂಕದ ಜಯ

Update: 2018-10-27 23:56 IST

ಪಾಟ್ನಾ, ಅ.28: ಪ್ರೊ ಕಬಡ್ಡಿ ಲೀಗ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಯು ಮುಂಬಾ ತಂಡ ಆತಿಥೇಯ ಪಾಟ್ನಾ ಪೈರೇಟ್ಸ್ ವಿರುದ್ಧ ಕೇವಲ 1 ಅಂಕದಿಂದ ರೋಚಕ ಜಯ ದಾಖಲಿಸಿದೆ.

ಮುಂಬಾ ತಂಡ 40 ಅಂಕ ಗಳಿಸಿದರೆ, ತೀವ್ರ ಪೈಪೋಟಿ ನೀಡಿದ ಹಾಲಿ ಚಾಂಪಿಯನ್ ಪಾಟ್ನಾ 39 ಅಂಕ ಗಳಿಸಿ ಸೋಲೊಪ್ಪಿಕೊಂಡಿತು.ಮುಂಬಾ ಈ ವರ್ಷ ಆಡಿದ 6ನೇ ಪಂದ್ಯದಲ್ಲಿ 5ನೇ ಗೆಲುವು ದಾಖಲಿಸಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿತು.

ಇದಕ್ಕೆ ಮೊದಲು ನಡೆದ ಮತ್ತೊಂದು ಲೀಗ್ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 39-28 ಅಂತರದಿಂದ ಸೋಲಿಸಿತು. ಈ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿತು. ಜೈಪುರ ಸತತ 3ನೇ ಸೋಲು ಕಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News