ಹಿಂಸೆಗೆ ತಿರುಗಿದ ಲಂಕಾದ ರಾಜಕೀಯ ಬಿಕ್ಕಟ್ಟು: ಗುಂಡಿನ ದಾಳಿಯಲ್ಲಿ ಇಬ್ಬರಿಗೆ ಗಾಯ

Update: 2018-10-28 13:36 GMT

ಕೊಲಂಬೊ,ಅ.28: ಪ್ರಧಾನಿ ರೆನಿಲ್ ವಿಕ್ರಮಸಿಂಘೆಯ ಆಘಾತಕಾರಿ ಉಚ್ಚಾಟನೆಯ ನಂತರ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟ ತಲೆದೋರಿದ್ದು ರವಿವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಟ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾರ ಬೆಂಬಲಿಗರು ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗ ಅವರನ್ನು ಒತ್ತೆಯಾಳನ್ನಾಗಿ ಮಾಡಲು ಮುಂದಾದಾಗ ಸಚಿವರ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಧಾನಿ ವಿಕ್ರಮಸಿಂಘೆಯನ್ನು ಪದಚ್ಯುತಗೊಳಿಸಿ ಮಹಿಂದಾ ರಾಜಪಕ್ಸೆಯನ್ನು ನೂತನ ಪ್ರಧಾನಿಯನ್ನಾಗಿ ನೇಮಿಸಿದ ನಂತರ ದ್ವೀಪರಾಷ್ಟ್ರದಲ್ಲಿ ನಡೆದ ಮೊದಲ ಹಿಂಸಾಚಾರದ ಘಟನೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News