ಮಲ್ಯಗೆ ಭರವಸೆ ನೀಡಿದ್ದ ಸೌಲಭ್ಯಗಳನ್ನು ಜೈಲಿನಲ್ಲಿ ನನಗೂ ನೀಡಿ: ಸುಧಾ ಭಾರದ್ವಾಜ್ ಆಗ್ರಹ

Update: 2018-10-28 17:05 GMT

ಮುಂಬೈ, ಅ. 28: ಬ್ಯಾಂಕ್‌ಗಳಿಗೆ ಬಹು ಕೋಟಿ ವಂಚಿಸಿ ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಕಾರಾಗೃಹದಲ್ಲಿ ನೀಡಲಾಗುವುದು ಎಂದು ಕೇಂದ್ರ ಸರಕಾರ ನ್ಯಾಯಾಲಯದಲ್ಲಿ ಭರವಸೆ ನೀಡಿದ ಸೌಲಭ್ಯವನ್ನೇ ತನಗೂ ನೀಡಬೇಕು ಎಂದು ಮಾನವ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್ ರವಿವಾರ ಆಗ್ರಹಿಸಿದ್ದಾರೆ.

ಅನಾರೋಗ್ಯದ ಕಾರಣಕ್ಕೆ ಸೂಕ್ತ ಆಹಾರ, ಔಷಧ ಹಾಗೂ ಇತರ ಸೇವೆಗಳನ್ನು ನೀಡಬೇಕು ಎಂದು ಸುಧಾ ಭಾರದ್ವಾಜ್ ಅವರ ವಕೀಲರು ನ್ಯಾಯಾಲಯದ ಮುಂದೆ ಪ್ರತಿಪಾದಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಜಯ ಮಲ್ಯ ಅವರಿಗೆ ನೀಡಲಾಗುವ ಸೌಲಭ್ಯಗಳ ಭರವಸೆಯಂತೆ ಭಾರದ್ವಾಜ್ ಅವರಿಗೆ ಕೂಡ ಕಾರಾಗೃಹವಾಸದ ಸಂದರ್ಭ ಸೌಲಭ್ಯಗಳನ್ನು ನೀಡಬೇಕು ಎಂದು ಭಾರದ್ವಾಜ್ ಪರ ವಕೀಲರು ಹೇಳಿದರು.

ಭಾರತದ ಜೈಲುಗಳ ಪರಿಸ್ಥಿತಿ ತುಂಬಾ ಕೆಟ್ಟದಾಗಿರುವುದರಿಂದ ತನ್ನನ್ನು ಭಾರತಕ್ಕೆ ಗಡಿಪಾರು ಮಾಡಬಾರದು ಎಂದು ಮಲ್ಯ ಪರ ವಕೀಲರು ಲಂಡನ್ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿದ ಭಾರತದ ಸಂಸ್ಥೆಗಳು, ಭಾರತದ ಕಾರಾಗೃಹದಲ್ಲಿ ಕೈದಿಗಳಿಗೆ ಲಭ್ಯವಿರುವ ಸೌಲಭ್ಯಗಳ ಪಟ್ಟಿ ನೀಡಿದ್ದರು. ನಗರದ ನ್ಯಾಯಾಲಯ ಶುಕ್ರವಾರ ಜಾಮೀನು ನಿರಾಕರಿಸಿದ ಬಳಿಕ ಭಾರದ್ವಾಜ್ ಅವರನ್ನು ಗುರ್ಗಾಂವ್‌ನಿಂದ ಬಂಧಿಸಲಾಗಿತ್ತು ಹಾಗೂ ಅನಂತರ ನಗರಕ್ಕೆ ತರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News