ಅಸ್ಸಾಂ: ಪೌರತ್ವದ ಸಾಬಿತು ಪಡಿಸುವಂತೆ ನೋಟಿಸ್: ಮನನೊಂದ ವ್ಯಕ್ತಿ ಆತ್ಮಹತ್ಯೆ

Update: 2018-10-28 17:29 GMT

ದಿಸ್‌ಪುರ, ಅ. 28: ಪೌರತ್ವ ಸಾಬೀತುಪಡಿಸುವಂತೆ ವಿದೇಶಿಯರ ಟ್ರಿಬ್ಯೂನಲ್ ಇತ್ತೀಚೆಗೆ ನೋಟಿಸು ಜಾರಿ ಮಾಡಿದ ಬಳಿಕ ಹತಾಶೆಗೊಂಡ ವ್ಯಕ್ತಿಯೋರ್ವ ಆತ್ಮಹತ್ಯೆ ಶರಣಾದ ಘಟನೆ ಉದಲ್‌ಗಿರಿಯ ಘಾಗ್ರಾ ಗ್ರಾಮದಲ್ಲಿ ನಡೆದಿದೆ.

ಪ್ರಕರಣ ಪರಿಹರಿಸಲು ಸ್ಥಳೀಯ ವಿದೇಶಿಯ ಟ್ರಿಬ್ಯೂನಲ್‌ನ ಅಧಿಕಾರಿಗಳು ಲಂಚ ಆಗ್ರಹಿಸಿದ್ದರು ಎಂದು ಸಂತ್ರಸ್ತನ ಕುಟುಂಬದವರ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಬೋಡೋ ಟೆರಿಟೋರಿಯಲ್ ಆಡಳಿತಾತ್ಮಕ ಜಿಲ್ಲೆಯ ಉದಲ್‌ಗಿರಿಯ ಘಾಗ್ರಾ ಗ್ರಾಮದ ದೀಪಕ್ ದೇಬಂತ್ ಅವರ ಮೃತದೇಹ ಮನೆಯ ಹಿಂದೆ ಪತ್ತೆಯಾಗಿತ್ತು. ಪ್ರಕರಣ ರವಿವಾರ ಬೆಳಗ್ಗೆ ವರದಿಯಾಗಿತ್ತು ಎಂದು ಉದಲ್‌ಗಿರಿಯ ಪೊಲೀಸ್ ಅಧೀಕ್ಷಕ ರಾಜ್‌ವೀರ್ ತಿಳಿಸಿದ್ದಾರೆ.

49ರ ಹರೆಯದ ದೇಬಂತ್ ಸೈಕಲ್ ದುರಸ್ಥಿಗಾರನಾಗಿ ಕೆಲಸ ಮಾಡುತ್ತಿದ್ದರು. ಅವರ ಮೃತದೇಹದ ಪಕ್ಕ ಯಾವುದೇ ಸುಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ರಾಜ್‌ವೀರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News