ಸರಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಇಕೆವೈಸಿ ಬಳಸಿ: ಬ್ಯಾಂಕ್‌ಗಳಿಗೆ ಯುಐಡಿಎಐ ಸೂಚನೆ

Update: 2018-10-28 18:37 GMT

ಹೊಸದಿಲ್ಲಿ, ಅ. 18: ಸರಕಾರದ ಸಬ್ಸಿಡಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳನ್ನು ಪ್ರಮಾಣೀಕರಿಸಲು ಆಧಾರ್ ಇಕೆವೈಸಿ ಬಳಸಲು ಸಾಧ್ಯ. ಇತರ ಗ್ರಾಹಕರಿಗೆ ಪರಿಶೀಲನೆಗೆ ಆಧಾರ್ ಕಾರ್ಡ್‌ನ್ನೇ ಬಳಸಬಹುದು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ಬ್ಯಾಂಕ್‌ಗಳಿಗೆ ಸ್ಪಷ್ಟಪಡಿಸಿದೆ.

ಆಧಾರ್ ಕಾರ್ಡ್ ಅನ್ನು ಬಳಸಲು ಸಾಧ್ಯವಿರುವ ರೀತಿ ಹಾಗೂ ನಿದರ್ಶನಗಳನ್ನು ಸ್ಪಷ್ಟಪಡಿಸಿ ಯುಐಡಿಎಐ ಕಳೆದ ತಿಂಗಳು ಬ್ಯಾಂಕ್‌ಗಳಿಗೆ ಪತ್ರ ಬರೆದಿತ್ತು. ಈ ಪತ್ರದ ಪ್ರತಿಯನ್ನು ರಿಸರ್ವ್ ಬ್ಯಾಂಕ್‌ಗೆ ಕೂಡ ರವಾನಿಸಿತ್ತು ಎಂದು ಯುಐಡಿಎಐ ಅಧಿಕಾರಿ ತಿಳಿಸಿದ್ದಾರೆ. ಆಧಾರ್ ಕಾಡ್ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನ ಬಳಿಕ ಈ ವಿಷಯದ ಕುರಿತು ಸ್ವೀಕರಿಸಿದ ಕಾನೂನು ಅಭಿಪ್ರಾಯದ ಹಿನ್ನೆಲೆಯಲ್ಲಿ ಯುಐಡಿಎಐ ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ. ಸರಕಾರಿ ಸಬ್ಸಿಡಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಪ್ರಮಾಣೀಕರಣಕ್ಕೆ ಆಧಾರ್ ಅನ್ನು ಬಳಸಬಹುದು ಎಂದು ಬ್ಯಾಂಕ್‌ಗಳಿಗೆ ಮಾಹಿತಿ ನೀಡಿದ್ದ ಯುಐಡಿಎಐ ಆಧಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿ ತೀರ್ಪಿನ ಬೆಳಕಲ್ಲಿ ಬ್ಯಾಂಕ್‌ನ ಇತರ ಗ್ರಾಹಕರಿಗೆ ಆಧಾರ್ ಕಾರ್ಡ್ ಅನ್ನು ಬಳಸುವ ವಿವಿಧ ಆಯ್ಕೆಗಳನ್ನು ಪಟ್ಟಿ ಮಾಡಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News