ಬ್ಯಾಂಕ್‌ನ ಸ್ವಾಯತ್ತೆಯಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದು: ಆರ್‌ಬಿಐ ಉದ್ಯೋಗಿಗಳ ಸಂಘಟನೆ

Update: 2018-10-29 17:04 GMT

ಕೋಲ್ಕತ್ತಾ, ಅ. 29: ರಿಸರ್ವ್ ಬ್ಯಾಂಕ್ ಇಂಡಿಯಾದ ಸ್ವಾಯತ್ತೆ ಬಗ್ಗೆ ಉಪ ಗವರ್ನರ್ ವಿರಲ್ ಆಚಾರ್ಯ ಕಳವಳ ವ್ಯಕ್ತಪಡಿಸಿದ ದಿನಗಳ ಬಳಿಕ ಸೋಮವಾರ ಅವರ ಬೆಂಬಲಕ್ಕೆ ನಿಂತಿರುವ ಆರ್‌ಬಿಐ ಉದ್ಯೋಗಿಗಳ ಸಂಘಟನೆ, ಆರ್‌ಬಿಐಯನ್ನು ನಿರ್ಲಕ್ಷಿಸುವುದು ದುರಂತಕ್ಕೆ ದಾರಿ ಮಾಡಿಕೊಟ್ಟಂತೆ. ಸರಕಾರ ಬ್ಯಾಂಕ್‌ನ ಸ್ವಾಯತ್ತೆಯಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದಿದೆ.

ಕಳೆದ ವಾರ ಇಲ್ಲಿ ಎ.ಡಿ. ಶ್ರಾಫ್ ಸ್ಮಾರಕ ಉಪನ್ಯಾಸ ನೀಡಿದ ಆಚಾರ್ಯ, ಸರಕಾರ ತನ್ನ ಬ್ಯಾಂಕ್‌ನ ಸ್ವಾಯತ್ತೆಗೆ ಗೌರವ ನೀಡದೇ ಇರುವುದರಿಂದ ಮಾರುಕಟ್ಟೆಯಲ್ಲಿ ಶೀಘ್ರ ಅಥವಾ ತಡವಾಗಿ ಕ್ಷೋಭೆ ಉಂಟಾಗಲಿದೆ ಎಂದಿದ್ದರು. ಕೇಂದ್ರ ಬ್ಯಾಂಕ್ ಅನ್ನು ನಿರ್ಲಕ್ಷಿಸುವುದು ದುರಂತಕ್ಕೆ ಅಹ್ವಾನ ನೀಡಿದಂತೆ ಹಾಗೂ ಸರಕಾರ ಇದನ್ನು ಬಿಡಬೇಕು ಎಂದು ನಾವು ದೃಢವಾಗಿ ಹೇಳುತ್ತೇವೆ ಎಂದು ರಿಸರ್ವ್ ಬ್ಯಾಂಕ್ ಇಂಡಿಯಾದ ಉದ್ಯೋಗಿಗಳ ಸಂಘಟನೆ ಪತ್ರದಲ್ಲಿ ಹೇಳಿದೆ. ಆರ್‌ಬಿಐ ಮೇಲೆ ಸವಾರಿ ಮಾಡಲು ಪ್ರಯತ್ನಿಸುವುದಕ್ಕಿಂತ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಬಹುದು ಎಂದು ಅಸೋಸಿಯೇಶನ್‌ನ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News