×
Ad

ಲಂಕಾ: ವಿಕ್ರಮಸಿಂಘೆ ಬೆಂಬಲಿಗರ ಬೃಹತ್ ಪ್ರತಿಭಟನೆ

Update: 2018-10-30 22:28 IST

ಕೊಲಂಬೊ, ಅ. 30: ಶ್ರೀಲಂಕಾದ ಉಚ್ಚಾಟಿತ ಪ್ರಧಾನಿ ರನಿಲ್ ವಿಕ್ರಮಸಿಂಘೆಯ ಸಾವಿರಾರು ಬೆಂಬಲಿಗರು ಮಂಗಳವಾರ ರಾಜಧಾನಿ ಕೊಲಂಬೊದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶುಕ್ರವಾರ ರನಿಲ್ ವಿಕ್ರಮಸಿಂಘೆಯನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿ, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೂತನ ಪ್ರಧಾನಿಯಾಗಿ ನೇಮಿಸಿರುವುದನ್ನು ವಿರೋಧಿಸಿ ಪ್ರತಿಭಟನಕಾರರು ರಾಜಧಾನಿಯ ರಸ್ತೆಗಳನ್ನು ಮುಚ್ಚಿದರು.

ಸುಮಾರು 1 ಲಕ್ಷ ಜನರು ಬೀದಿಗಿಳಿದರು ಎಂದು ವಿಕ್ರಮಸಿಂಘೆಯ ಪಕ್ಷ ಹೇಳಿದೆ. ‘ವಂಚಕ ಪ್ರಧಾನಿ, ಕೆಳಗಿಳಿಯಿರಿ’ ಎಂಬುದಾಗಿ ಪ್ರತಿಭಟನಕಾರರು ಮಹಿಂದ ರಾಜಪಕ್ಸರನ್ನು ಉದ್ದೇಶಿಸಿ ಘೋಷಣೆಗಳನ್ನು ಕೂಗಿದರು.

ಅಧ್ಯಕ್ಷ ಸಿರಿಸೇನರ ಚಿತ್ರಗಳನ್ನು ಅವರು ಹರಿದುಹಾಕಿದರು.

‘‘ನಾವು ಉಚ್ಚಾಟನೆಗೆ ವಿರುದ್ಧವಾಗಿದ್ದೇವೆ. ಈ ರೀತಿಯಲ್ಲಿ ವರ್ತಿಸಲು ನಾವು ಸಿರಿಸೇನಗೆ ಮತ ಹಾಕಲಿಲ್ಲ’’ ಎಂದು ಜನರನ್ನುದ್ದೇಶಿಸಿ ಮಾತನಾಡಿದ ವಿಕ್ರಮಸಿಂಘೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News