ಆರ್ ಬಿಐ ಗವರ್ನರ್ ಸರಕಾರದೊಂದಿಗೆ ಕೆಲಸ ಮಾಡಬೇಕು, ಇಲ್ಲದಿದ್ದರೆ ರಾಜೀನಾಮೆ ನೀಡಲಿ

Update: 2018-10-31 16:37 GMT

ಹೊಸದಿಲ್ಲಿ, ಅ.31: ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಆರ್ ಬಿಐ ಗವರ್ನರ್ ಕೇಂದ್ರ ಸರಕಾರದೊಂದಿಗೆ ಕೆಲಸ ಮಾಡಬೇಕು ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಆರೆಸ್ಸೆಸ್ ಆರ್ಥಿಕ ವಿಭಾಗದ ಮುಖ್ಯಸ್ಥ ಅಶ್ವನಿ ಮಹಾಜನ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಅವರು ಶಿಸ್ತನ್ನು ಪಾಲಿಸದಿದ್ದರೆ, ರಾಜೀನಾಮೆ ನೀಡುವುದೇ ಒಳಿತು” ಎಂದು ಹೇಳಿದರು. ಆರೆಸ್ಸೆಸ್ ನ ಸ್ವದೇಶಿ ಜಾಗರಣ್ ಮಂಚ್ ಎಂಬ ಆರ್ಥಿಕ ವಿಭಾಗದ ಮುಖ್ಯಸ್ಥರಾಗಿದ್ದಾರೆ ಮಹಾಜನ್.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರಕಾರದ ನಡುವಿನ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಆರ್‍ ಬಿಐ ಗವರ್ನರ್ ಊರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಇಂದು ಬೆಳಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News