ಸುಶ್ಮಾ ಸ್ವರಾಜ್ ಮನಗೆದ್ದ ಕುವೈತ್ ಗಾಯಕ
Update: 2018-10-31 22:16 IST
ಕುವೈತ್ ಸಿಟಿ, ಅ. 31: ಕುವೈತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ಗಾಯಕ ಮುಬಾರಕ್ ಅಲ್-ರಶೀದ್ ಹಾಡಿದ ಮಹಾತ್ಮಾ ಗಾಂಧೀಜಿಯವರ ನೆಚ್ಚಿನ ಭಜನೆ ‘ವೈಷ್ಣವ್ ಜನ್ ತೊ ತೇನೆ ಕಹಿಯೆ’ ವಿದೇಶ ಸಚಿವೆ ಸುಶ್ಮಾ ಸ್ವರಾಜ್‌ರ ಶ್ಲಾಘನೆಗೆ ಪಾತ್ರವಾಯಿತು.
ಗಾಯಕನ ಹಾಡಿನಿಂದ ಸಂತುಷ್ಟಗೊಂಡ ಸುಶ್ಮಾ ಸ್ವರಾಜ್, ‘‘ಗಾಯಕನು ಹಾಡಿನ ಎಲ್ಲ ಸಾಹಿತ್ಯವನ್ನು ನೆನಪಿನಲ್ಲಿರಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ’’ ಎಂದರು.
‘‘ಈ ಕಾರ್ಯಕ್ರಮಕ್ಕೆ ಭಾರತೀಯ ರಾಯಭಾರ ಕಚೇರಿ ನನ್ನನ್ನು ಆಹ್ವಾನಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಭಾರತದ ವಿದೇಶ ಸಚಿವೆ ಸುಶ್ಮಾ ಸ್ವರಾಜ್‌ರ ಎದುರು ಮಹಾತ್ಮಾ ಗಾಂಧೀಜಿಯ ನೆಚ್ಚಿನ ಭಜನೆ ‘ವೈಷ್ಣವ್ ಜನ್ ತೋ ತೇನೇ ಕಹಿಯೆ’ ಯನ್ನ ಹಾಡುವ ಅವಕಾಶ ಸಿಕ್ಕಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ’’ ಎಂದು ಗಾಯಕ ಮುಬಾರಕ್ ಅಲ್-ರಶೀದ್ ಹೇಳಿದ್ದಾರೆ