×
Ad

ಅಮೆರಿಕ ಕಾಂಗ್ರೆಸ್‌ಗೆ ಪ್ರಥಮ ಬಾರಿ ಪ್ರವೇಶಿಸಲಿರುವ ಮುಸ್ಲಿಮ್ ಮಹಿಳೆಯರು

Update: 2018-10-31 22:36 IST
ಸೊಮಾಲಿ ಇಲ್ಹನ್ ಉಮರ್

ಶಿಕಾಗೊ, ಅ. 31: ಅಮೆರಿಕದಲ್ಲಿ ಮುಂದಿನ ವಾರ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ, ಮುಸ್ಲಿಮ್ ವಿರೋಧಿ ಮತ್ತು ವಲಸೆ ವಿರೋಧಿ ಭಾವನೆಗಳ ಹೊರತಾಗಿಯೂ, ಮತದಾರರು ಇಬ್ಬರು ಮುಸ್ಲಿಮ್ ಮಹಿಳೆಯರನ್ನು ಸಂಸತ್ತು ಕಾಂಗ್ರೆಸ್‌ಗೆ ಆರಿಸಲು ಸಜ್ಜಾಗಿದ್ದಾರೆ.

ಸೊಮಾಲಿ ನಿರಾಶ್ರಿತೆಯಾಗಿರುವ ಇಲ್ಹನ್ ಉಮರ್, ಮಿನಸೋಟ ರಾಜ್ಯದ ಡೆಮಾಕ್ರಟಿಕ್ ಪ್ರಾಬಲ್ಯ ಜಿಲ್ಲೆಯೊಂದರಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಅವರು ಅಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಫೆಲೆಸ್ತೀನ್ ವಲಸಿಗ ಹೆತ್ತವರ ಮಗಳಾಗಿ ಡೆಟ್ರಾಯಿಟ್‌ನಲ್ಲಿ ಜನಿಸಿರುವ ರಶೀದಾ ತ್ಲೈಬ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾಗುವುದು ಖಚಿತವಾಗಿದೆ. ಯಾಕೆಂದರೆ, ಅವರ ಕ್ಷೇತ್ರದಲ್ಲಿ ಎದುರಾಳಿಗಳೇ ಇಲ್ಲ!

ಈ ಇಬ್ಬರು ಮಹಿಳೆಯರು ಅಮೆರಿಕ ಕಾಂಗ್ರೆಸ್ ಪ್ರವೇಶಿಸಲಿರುವ ಮೊದಲ ಮುಸ್ಲಿಮ್ ಮಹಿಳೆಯರಾಗಲಿದ್ದಾರೆ. ಅವರ ಆಯ್ಕೆಯ ಬಳಿಕ, ಕಾಂಗ್ರೆಸ್‌ನಲ್ಲಿರುವ ಮುಸ್ಲಿಮರ ಸಂಖ್ಯೆ 3ಕ್ಕೆ ಏರಲಿದೆ.

ಆಫ್ರಿಕನ್ ಅಮೆರಿಕನ್ ಮುಸ್ಲಿಮ್ ಆಗಿರುವ ಆ್ಯಂಡ್ರಿ ಕಾರ್ಸನ್ ಈಗಾಗಲೇ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಮುಂಬರುವ ಮಧ್ಯಂತರ ಚುನಾವಣೆಯಲ್ಲಿ ಅವರು ಇಂಡಿಯಾನ ರಾಜ್ಯದ ಡೆಮಾಕ್ರಟಿಕ್ ಪ್ರಾಬಲ್ಯದ ಜಿಲ್ಲೆಯೊಂದರಿಂದ ಆರಿಸಿ ಬರುವುದು ಬಹುತೇಕ ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News