×
Ad

ಪಾಸ್‌ಪೋರ್ಟ್ ಸೂಚ್ಯಂಕ: ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 66ನೇ ಸ್ಥಾನ

Update: 2018-10-31 22:36 IST

ಹೊಸದಿಲ್ಲಿ, ಅ. 31: ಜಾಗತಿಕ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಪಾಸ್‌ಪೋರ್ಟ್ ಜಗತ್ತಿನಲ್ಲಿ 66ನೇ ಸ್ಥಾನ ಪಡೆದುಕೊಂಡಿದೆ. ಉಚಿತ ವಿಸಾ ಅಂಕಗಳ ಆಧಾರದಲ್ಲಿ ಈ ಶ್ರೇಣಿ ನೀಡಲಾಗಿದೆ.

 ವಿಸಾ ಮುಕ್ತವಾಗಿ 66 ರಾಷ್ಟ್ರಗಳಿಗೆ ಪ್ರಯಾಣಿಸುವ ಸೌಲಭ್ಯದ ಹಿನ್ನೆಲೆಯಲ್ಲಿ ಭಾರತದ ಪಾಸ್‌ಪೋರ್ಟ್‌ಗೆ ಈ ಶ್ರೇಣಿ ನೀಡಲಾಗಿದೆ. ವಾರ್ಷಿಕ ಪಾಸ್‌ಪೋರ್ಟ್ ಸೂಚ್ಯಾಂಕದ ಪ್ರಕಾರ, 165 ರಾಷ್ಟ್ರಗಳಿಗೆ ವಿಸಾ ಮುಕ್ತ ಪ್ರಯಾಣ ಲಭ್ಯವಾಗುವುದರೊಂದಿಗೆ ಸಿಂಗಾಪುರ ಹಾಗೂ ಜರ್ಮನಿ ಜಗತ್ತಿನ ಅತಿ ಪ್ರಭಾವಶಾಲಿ ಪಾಸ್‌ಪೋರ್ಟ್ ಹೊಂದಿದೆ. ಅಂದರೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಸೂಚ್ಯಾಂಕದಲ್ಲಿ ಅಫಘಾನಿಸ್ಥಾನ ಕೊನೆಯ ಸ್ಥಾನ ಪಡೆದುಕೊಂಡಿದೆ.

 22 ಅಂಕ ಗಳಿಸಿದ ಅಪಘಾನಿಸ್ಥಾನ 91ನೇ ಶ್ರೇಣಿ ಪಡೆದುಕೊಂಡಿದೆ. 26 ಅಂಕಗಳೊಂದಿಗೆ ಪಾಕಿಸ್ತಾನ ಹಾಗೂ ಇರಾಕ್ 90ನೇ ಸ್ಥಾನ, 29 ಅಂಕಗಳೊಂದಿಗೆ ಸಿರಿಯಾ 87ನೇ ಸ್ಥಾನ ಹಾಗೂ 34 ಅಂಕಗಳೊಂದಿಗೆ ಸೋಮಾಲಿಯಾ 87ನೇ ಸ್ಥಾನ ಪಡೆದುಕೊಂಡಿದೆ. ಪೌರತ್ವ ಯೋಜನಾ ಸಂಸ್ಥೆ ಹೆನ್ಲೇ ಆ್ಯಂಡ್ ಪಾರ್ಟ್ನರ್ಸ್‌ನ ವಾರ್ಷಿಕ ಪಾಸ್‌ಪೋರ್ಟ್ ಸೂಚ್ಯಾಂಕ ಈ ಮಾಹಿತಿ ನೀಡಿದೆ. ವಿಸಾ ಇಲ್ಲದೆ ಪ್ರಯಾಣಿಸಬಹುದಾದ ದೇಶಗಳ ಸಂಖ್ಯೆ ಅಥವಾ ಆಗಮನದ ಸಂದರ್ಭ ವೀಸಾ, ಪ್ರವಾಸಿಗರ ವೀಸಾ ಅಥವಾ ಎಲೆಕ್ಟ್ರಾನಿಕ್ ಪ್ರಯಾಣ ಪರವಾನಿಗೆ ಪಡೆಯಲು ಸಾಧ್ಯವಿರುವ ದೇಶಗಳ ಸಂಖ್ಯೆ ಆಧರಿಸಿ ಈ ಶ್ರೇಣಿ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News