ನಿರಾಕರಿಸುವ ಹಕ್ಕು ಲೈಂಗಿಕ ಕಾರ್ಯಕರ್ತೆಯರಿಗೂ ಇದೆ: ಸುಪ್ರೀಂ ಕೋರ್ಟ್

Update: 2018-11-02 18:11 GMT

 ಹೊಸದಿಲ್ಲಿ, ನ.1: ಸೇವೆ ನಿರಾಕರಿಸುವ ಹಾಗೂ ಬಲವಂತಪಡಿಸಿದಾಗ ಪರಿಹಾರ ಕೋರುವ ಹಕ್ಕು ಲೈಂಗಿಕ ಕಾರ್ಯಕರ್ತರಿಗೆ ಕೂಡ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

2009ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್ ನಾಲ್ವರಿಗೆ ಕೆಳ ನ್ಯಾಯಾಲಯ ನೀಡಿದ 10 ವರ್ಷ ಕಾರಾಗೃಹ ಶಿಕ್ಷೆಯನ್ನು ಎತ್ತಿ ಹಿಡಿದಿದೆ. 1997ರಲ್ಲಿ ದಿಲ್ಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಈ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಅಪರಾಧಿಗಳು ಮುಂದಿನ ಮೂರು ವಾರಗಳಲ್ಲಿ ಶರಣಾಗತರಾಗಿ ಉಳಿದಿರುವ ಕಾರಾಗೃಹ ಶಿಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದೆ. ಮಹಿಳೆ ಶ್ರೇಷ್ಠ ಎಂದು ಊಹಿಸಿದರೆ, ಯಾವುದೇ ಲೈಂಗಿಕ ಸಂಭೋಗವನ್ನು ನಿರಾಕರಿಸುವ ಹಕ್ಕು ಆಕೆಗಿದೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News