ಪ್ರಿಯಾಂಕ್ ಪಾಂಚಾಲ್ ಶತಕ: ಗುಜರಾತ್‌ಗೆ 9 ವಿಕೆಟ್ ಜಯ
ಹೊಸದಿಲ್ಲಿ,ನ.4: ಪ್ರಿಯಾಂಕ್ ಪಾಂಚಾಲ್ ಬಾರಿಸಿದ 112 ರನ್‌ಗಳ ನೆರವಿನಲ್ಲಿ ಗುಜರಾತ್ ತಂಡ ಇಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಬರೋಡದ ವಿರುದ್ಧ 9 ವಿಕೆಟ್‌ಗಳ ಜಯ ಗಳಿಸಿದೆ.
ಪಂದ್ಯದ ಅಂತಿಮ ದಿನವಾಗಿರುವ ರವಿವಾರ ಬರೋಡ ತಂಡ ರುಶ್ ಕಲಾರಿಯಾ (35ಕ್ಕೆ 6) ದಾಳಿಗೆ ಸಿಲುಕಿ ಎರಡನೇ ಇನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 179 ರನ್‌ಗಳಿಗೆ ಆಲೌಟಾಗಿತ್ತು.
ಗೆಲುವಿಗೆ 168 ರನ್‌ಗಳ ಸವಾಲನ್ನು ಪಡೆದ ಗುಜರಾತ್ ತಂಡ 48.2 ಓವರ್‌ಗಳಲ್ಲಿ ಗೆಲುವಿಗೆ ಅಗತ್ಯದ ರನ್ ದಾಖಲಿಸಿತು.
ನಾಯಕ ಪಾಂಚಾಲ್ ಔಟಾಗದೆ 112 ರನ್(132ಎ, 14ಬೌ, 2ಸಿ), ಭಾರ್ಗವ್ ಮೆರ್ರಾಯ್ ಔಟಾಗದೆ 33ರನ್, ಮತ್ತು ಸಮಿತ್ ಗೋಯಲ್ 22 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಜೈಪುರದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ಗ್ರೂಪ್ ಸಿ ಪಂದ್ಯದಲ್ಲಿ ರಾಜಸ್ಥಾನ ತಂಡ 75 ರನ್‌ಗಳ ಜಯ ಗಳಿಸಿದೆ. ಕಾನ್ಪುರದಲ್ಲಿ ಗೋವಾ ವಿರುದ್ಧ ಉತ್ತರ ಪ್ರದೇಶ 247 ರನ್‌ಗಳ ಜಯ ಗಳಿಸಿದೆ. ಕೋಲ್ಕತಾದಲ್ಲಿ ಮಣಿಪುರ ವಿರುದ್ಧ ಸಿಕ್ಕಿಂ ತಂಡ ಇನಿಂಗ್ಸ್ ಮತ್ತು 27 ರನ್‌ಗಳ ಜಯ ಗಳಿಸಿದೆ.
ಶಿಲ್ಲಾಂಗ್‌ನಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಮೇಘಾಲಯ 7 ವಿಕೆಟ್‌ಗಳ ಜಯ ದಾಖಲಿಸಿದೆ. ಡಿಮಾಪುರ್‌ನಲ್ಲಿ ಮಿಝರಾಂ ವಿರುದ್ಧ ನಾಗಲ್ಯಾಂಡ್ ಇನಿಂಗ್ಸ್ 333 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಉತ್ತರಾಖಂಡ್‌ನಲ್ಲಿ ಬಿಹಾರ್ ವಿರುದ್ಧ ಉತ್ತರಾಖಂಡ್ ತಂಡ 10 ವಿಕೆಟ್‌ಗಳ ಗೆಲುವು ದಾಖಲಿಸಿದೆ.
ದಿಂಡಿಗಲ್‌ನಲ್ಲಿ ತಮಿಳುನಾಡು ಮತ್ತು ಮದ್ಯಪ್ರದೇಶಗಳ ನಡುವಿನ ಎಲೈಟ್ ಬಿ ಗುಂಪಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.