ಇಸ್ರೇಲ್ ಸೈನಿಕರಿಂದ ದಾಳಿ: ಫೆಲೆಸ್ತೀನ್ ಪ್ರತಿರೋಧದ ಪ್ರತಿಬಿಂಬವಾಗಿದ್ದ ಯುವಕನಿಗೆ ಗಾಯ

Update: 2018-11-06 11:31 GMT

ಗಾಝಾ, ನ.6: ಫೆಲೆಸ್ತೀನ್ ಜನರ ಪ್ರತಿರೋಧದ ಪ್ರತಿಬಿಂಬ ಎಂದು ವಿಶ್ವಾದ್ಯಂತ ವೈರಲ್ ಆಗಿದ್ದ ಫೋಟೊದಲ್ಲಿದ್ದ ಫೆಲೆಸ್ತೀನ್ ಯುವಕ ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಈ ಫೋಟೊಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇಸ್ರೇಲ್ ವಿರುದ್ಧ ಗಾಝಾ ಗಡಿಯಲ್ಲಿ ಫೆಲೆಸ್ತೀನಿಯರು ಪ್ರತಿಭಟನೆ ನಡೆಸುತ್ತಿದ್ದಾಗ ಅನದೊಲು ಏಜೆನ್ಸಿಯ ಮುಸ್ತಫಾ ಹಸ್ಸೋನಾ ಈ ಚಿತ್ರವನ್ನು ಕ್ಲಿಕ್ಕಿಸಿದ್ದರು.

ಒಂದು ಕೈಯಲ್ಲಿ ಫೆಲೆಸ್ತೀನ್ ಧ್ವಜ ಮತ್ತೊಂದು ಕೈಯಲ್ಲಿ ಕಡೆಗೋಲು ಹಿಡಿದ 22 ವರ್ಷದ ಐದ್ ಅಬು ಅಮ್ರ್ ರ ಚಿತ್ರವು ಫ್ರೆಂಚ್ ಹೋರಾಟದ ‘ಲಿಬರ್ಟಿ’ಯನ್ನು ಹೋಲುತ್ತದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇಸ್ರೇಲ್ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ಅಬು ಅಮ್ರ್ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದರು. ಸೋಮವಾರ ನಡೆದ ಪ್ರತಿಭಟನೆ ವೇಳೆ ಇಸ್ರೇಲ್ ಸೈನಿಕರು ಸಿಡಿಸಿದ ಗುಂಡಿನಿಂದ ಅಮ್ರ್ ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News